ಮಧ್ಯ ಪ್ರದೇಶ

ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ 10ನೇ ತರಗತಿ ವಿದ್ಯಾರ್ಥಿ

ಭೋಪಾಲ್:  ಮಧ್ಯಪ್ರದೇಶದ ಛತ್ತರ್‌ಪುರ ನಗರದಲ್ಲಿ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸುತ್ತಿರುವುದರಿಂದ ಒತ್ತಡಕ್ಕೆ ಒಳಗಾಗಿದ್ದ 10ನೇ ತರಗತಿ ವಿದ್ಯಾರ್ಥಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನಿಗೆ ಮಂಗಳವಾರ ಗಣಿತ ಪರೀಕ್ಷೆ ಇತ್ತು. ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ಆತ ಪರೀಕ್ಷೆಯ ದಿನದಂದು ಬೇಗ ಏಳಲು ಬೆಳಿಗ್ಗೆ 5 ಗಂಟೆಗೆ ಅಲಾರಾಂ ಇಟ್ಟಿದ್ದರು ಎಂದು ಆತನ ಚಿಕ್ಕಪ್ಪ ಅನುಪಮ್ ತಾಮ್ರಕರ್ ಸುದ್ದಿಗಾರರಿಗೆ ತಿಳಿಸಿದರು.

17 ವರ್ಷದ ಬಾಲಕ ಮಂಗಳವಾರ ಮಧ್ಯರಾತ್ರಿ ಹನುಮಾನ್ ಟೋರಿಯಾ ಪ್ರದೇಶದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅನುಪ್ ಯಾದವ್ ಹೇಳಿದ್ದಾರೆ.

ಬೆಳಿಗ್ಗೆ ಅಲಾರಾಂ ಬಾರಿಸಿದಾಗ, ಬಾಲಕನ ಕುಟುಂಬ ಸದಸ್ಯರು ಅವನ ಕೋಣೆಗೆ ಹೋಗಿ ನೋಡಿದಾಗ ಆತ ಸ್ಕಾರ್ಫ್‌ನೊಂದಿಗೆ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಕೊರೊನಾ ವೈರಸ್ ಪ್ರೇರಿತ ನಿರ್ಬಂಧಗಳ ಹಿನ್ನೆಲೆಯಲ್ಲಿ ಬಾಲಕ ಕಳೆದ ಎರಡು ವರ್ಷಗಳಿಂದಲೂ ಆನ್‌ಲೈನ್ ತರಗತಿಗಳನ್ನು ಕೇಳುತ್ತಿದ್ದನು. ಆದರೆ ಈಗ ಭೌತಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪರೀಕ್ಷೆ ಸ್ವರೂಪದಲ್ಲಿನ ಈ ಹಠಾತ್ ಬದಲಾವಣೆಯಿಂದಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ತಂದೆ ಅಮಿತ್ ತಾಮ್ರಕರ್ ಹೇಳಿದ್ದಾರೆ.

ಈ ಘಟನೆ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Swathi MG

Recent Posts

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

9 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

19 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

24 mins ago

ಹೊಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

32 mins ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

41 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

45 mins ago