News Karnataka Kannada
Thursday, April 18 2024
Cricket
ಮಧ್ಯ ಪ್ರದೇಶ

ಮಗುವಿನ ಪಾಲಿಗೆ ಯಮನಂತೆ ಬಂದ ‘ಇಲಿ’ : ಮಗು ಸ್ಥಳದಲ್ಲೇ ಸಾವು

Woman killed in accident, son Ashwin and husband critically injured
Photo Credit :

ಮಧ್ಯಪ್ರದೇಶ: ಚಂಡಿಯಾದಿಂದ ಮನೇಂದ್ರಗಢಕ್ಕೆ ಹೋಗುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದಂತೆ ಮೂವರು ಗಾಯಗೊಂಡಿದ್ದಾರೆ.

ಆಶ್ಚರ್ಯ ಅಂದರೆ ಈ ಅವಘಡಕ್ಕೆ ಕಾರಣವಾಗಿದ್ದು ಮಾತ್ರ ಇಲಿ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅದರೊಳಗಿದ್ದ ಇಲಿ ಏಕಾಏಕಿಯಾಗಿ ಕಾರಿನ ಡ್ಯಾಶ್​ಬೋರ್ಡ್​​ ಬಳಿ ಬಂದಿದೆ.

ಈ ವೇಳೆ ಕಾರು ಡ್ರೈವ್​ ಮಾಡ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಹೋಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಕೆಳಗಿಳಿದು, ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ರಭಸಕ್ಕೆ ಕಾರು ಸ್ಥಳದಲ್ಲೇ ಸ್ಫೋಟಗೊಂಡಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಕಾರು ಚಲಿಸುತ್ತಿದ್ದ ವ್ಯಕ್ತಿ, ಆತನ ಪತ್ನಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದೆ. ಇವರನ್ನು ತಕ್ಷಣವೇ ಶಾಹದೋಲ್​​​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು