News Karnataka Kannada
Wednesday, April 24 2024
Cricket
ಮಧ್ಯ ಪ್ರದೇಶ

ಅತ್ಯಾಚಾರ ಆರೋಪ: ಮದುವೆ ದಿನದಂದು ವರನನ್ನು ಬಂಧಿಸಿದ ಪೊಲೀಸರು

Marriage
Photo Credit :

ಜಬಲ್ಪುರ್(ಮಧ್ಯಪ್ರದೇಶ) : ಮದುವೆಗೆ ಎಲ್ಲ ರೀತಿಯ ತಯಾರಿ ನಡೆದಿತ್ತು. ವರನನ್ನ ಮೆರವಣಿಗೆ ಮಾಡಿಸಿ, ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕಾಗಮಿಸಿರುವ ಪೊಲೀಸರು ಆತನನ್ನ ಎತ್ತಾಕ್ಕೊಂಡು ಹೋಗಿದ್ದಾರೆ. ಮಧ್ಯಪ್ರದೇಶದ ಕಟ್ನಿಯಲ್ಲಿ ಈ ಘಟನೆ ನಡೆದಿದೆ.

ತಾಳ್ಳಿ ಕಟ್ಟುವುದಕ್ಕೂ ಮುಂಚಿತವಾಗಿ ಮೆರವಣಿಗೆ ಹೊರಡಲು ತಯಾರಾಗುತ್ತಿದ್ದ ವರನನ್ನ ಅತ್ಯಾಚಾರ ಆರೋಪದ ಮೇಲೆ ಜಬಲ್ಪುರ್​ ಪೊಲೀಸರು ಬಂಧಿಸಿದ್ದಾರೆ. ಮದುವೆ ಮಾಡಿಕೊಳ್ಳುವ ನೆಪದಲ್ಲಿ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಈತನ ಮೇಲೆ ಕೇಳಿ ಬಂದಿದೆ.

ಜಬಲ್ಪುರ್​​ ಲಾರ್ಡ್​ಗಂಜ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತನ ವಿರುದ್ಧ ಪ್ರಕರಣ ದಾ ಖಲಾಗಿತ್ತು. ಮದುವೆಯಾಗುವುದಾಗಿ ನಂಬಿಸಿ, ಹೋಟೆಲ್​ಗೆ ಕರೆದುಕೊಂಡು ಹೋಗಿ, ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಯುವತಿ ದೂರು ನೀಡಿದ್ದಳು.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಪ್ರಫುಲ್ ಶ್ರೀವಾಸ್ತವ್, ಅನುಜ್ ದುಬೆ ತನ್ನ ಸ್ನೇಹಿತೆ ಮೇಲೆ ಕಳೆದ ಕೆಲ ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದಾಗಿ ಪ್ರಕರಣ ದಾಖಲಾಗಿತ್ತು. ಹುಡುಗಿ ಜೊತೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದನಂತೆ.

ಇದರ ಬೆನ್ನಲ್ಲೇ ಹೋಟೆಲ್​ವೊಂದಕ್ಕೆ ಕರೆದುಕೊಂಡು ಹೋಗಿ, ಆತನ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ತದನಂತರ, ಬೇರೆ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದನು. ಇದಕ್ಕೆ ಸಂಬಂಧಿಸಿದಂತೆ ಹುಡುಗಿ ದೂರು ದಾಖಲು ಮಾಡಿದ್ದಳು.

ಏಪ್ರಿಲ್ 15ರಂದು ಯುವಕ ಮದುವೆ ಮಾಡಿಕೊಳ್ಳಲು ಮುಂದಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ನಾನು ಸ್ಥಳಕ್ಕೆ ತೆರಳಿ, ಆತನ ಬಂಧನ ಮಾಡಿದ್ದು, ವಿಚಾರಣೆ ನಡೆಸಲಿದ್ದೇವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು