ಕೊಚ್ಚಿ: ಬುರ್ಕಾ ಹಾಕಿಕೊಂಡು ಮಹಿಳೆಯರ ವಾಶ್ರೂಮ್ಗೆ ಹೋಗಿ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದ ರೊಬೊಟಿಕ್ಸ್ ಎಂಜಿನಿಯರಿಂಗ್ ಉದ್ಯೋಗಿಯನ್ನು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಅಭಿಮನ್ಯು (23) ಕೃತ್ಯವೆಸಗಿದ ಉದ್ಯೋಗಿ. ಕೊಚ್ಚಿಯ ಪ್ರತಿಷ್ಠಿತ ಮಾಲ್ಗೆ ಬುರ್ಕಾ ಹಾಕಿಕೊಂಡು ಹೋಗುತ್ತಿದ್ದ ಆರೋಪಿಯು ನೇರ ಮಹಿಳೆಯರ ವಾಶ್ರೂಮ್ಗೆ ತೆರಳುತ್ತಿದ್ದ. ಅಲ್ಲಿ ಬಾಗಿಲು ಬಳಿ ಒಂದು ಬಾಕ್ಸ್ನಲ್ಲಿ ತನ್ನ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದೇ ವೇಳೆ ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯ ಫೋನ್ ಮತ್ತು ಬುರ್ಕಾವನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ