News Karnataka Kannada
Saturday, April 20 2024
Cricket
ಕೇರಳ

ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಟಿಟಿಇಯನ್ನು ತಳ್ಳಿದ ಕುಡುಕ

ಕುಡುಕನೋರ್ವ ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಟಿಟಿಇಯನ್ನು ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್​ಪ್ರೆಸ್​​ ರೈಲಿನಲ್ಲಿ ನಡೆದಿದೆ.
Photo Credit : NewsKarnataka

ಕೇರಳ: ಕುಡುಕನೋರ್ವ ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಟಿಟಿಇಯನ್ನು ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್​ಪ್ರೆಸ್​​ ರೈಲಿನಲ್ಲಿ ನಡೆದಿದೆ.

ಟಿಟಿಇ ಇಕೆ ವಿನೋದ್​ ಎಂಬವರು ಸಾವನ್ನಪ್ಪಿದ್ದಾರೆ. ಆರೋಪಿಯು ಒಡಿಶಾ ಮೂಲದಿಂದ ಬಂದ ವಲಸೆ ಕಾರ್ಮಿಕ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ಏಳು ಗಂಟೆಗೆ ಎರ್ನಾಕುಲಂ-ಪಾಟ್ನಾ ಎಕ್ಸ್​ಪ್ರೆಸ್​​ನ ಎಸ್​11 ಕೋಚ್​ನಲ್ಲಿ ಕುಡುಕನೋರ್ವ ಚಲಿಸುತ್ತಿದ್ದನು. ಟಿಟಿಇ ವಿನೋದ್​​ ತನ್ನ ಕೆಲಸದಂತೆ ಆತನ ಬಳಿ ಟಿಕೆಟ್​ ಚೆಕ್ಕಿಂಗ್​ಗೆ ಬಂದಿದ್ದಾನೆ. ಟಿಕೆಟ್​ ಕೇಳಿದ್ದಾನೆ. ಇದಕ್ಕೆ ಕುಡುಕ ಆತನನ್ನು ರೈಲಿನಿಂದ ತಳ್ಳಿದ್ದಾನೆ.

ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ನಿಲ್ದಾಣದ ನಡುವೆ ವೆಲಪ್ಪಯ ಎಂಬಲ್ಲಿ ಕುಡುಕ ತಳ್ಳಿದ್ದರಿಂದ ವಿನೋದ್​ ರೈಲಿನಿಂದ ಹೊರಬಿದ್ದಿದ್ದಾನೆ. ಹೊಬಿದ್ದ ಟಿಟಿಇ ಅಲ್ಲೇ ಸಾವನ್ನಪ್ಪಿದ್ದಾನೆ.

ಪ್ರಾಥಮಿಕ ತನಿಖೆ ನಡೆಸಿದಾಗ ಆತ ಕುಡಿದಿರುವುದು ಗೊತ್ತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು