News Karnataka Kannada
Tuesday, April 30 2024
ಕೇರಳ

ʼಹೆಣ್ಣಿನ ಮಾದರಿಯ ಟ್ರೋಫಿ ನಮ್ಮನ್ನು ಪ್ರಚೋದಿಸುತ್ತದೆʼ: ನಟನಿಂದ ವಿವಾದಾತ್ಮಕ ಹೇಳಿಕೆ

'A female-style trophy inspires us': Actor's controversial statement
Photo Credit : News Kannada

ಕೇರಳ: ಮಲಯಾಳಂ ನಟ ಅಲೆನ್ಸಿಯರ್ ಲೋಪೆಜ್ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರತಿಮೆಯ ಬಗ್ಗೆ ಸ್ತ್ರೀದ್ವೇಷದ ಕಾಮೆಂಟ್‌ ಮಾಡಿದ್ದ ವಿವಾದಕ್ಕೆ ಕಾರಣವಾಗಿದೆ.

ಅಪ್ಪನ್’ (2022) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಬಂದ ನಟ ಅಲೆನ್ಸಿಯರ್ ಲೋಪೆಜ್, ಹೆಣ್ಣಿನ ಮಾದರಿಯ ಟ್ರೋಫಿ ಬಗ್ಗೆ ಕಾಮೆಂಟ್ ಮಾಡಿದರು.

53 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರ ತಿರುವನಂತಪುರಂನಲ್ಲಿ ನಡೆದಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ʼನನ್ನದೊಂದು ವಿನಂತಿ ಇದೆ. ಮಹಿಳೆಯ ಮಾದರಿಯಲ್ಲಿ ಈ ಪ್ರತಿಮೆಯನ್ನು ಪ್ರಸ್ತುತಪಡಿಸುವ ಮೂಲಕ ನಮ್ಮನ್ನು ಪ್ರಚೋದಿಸಬೇಡಿ. ಪುರುಷ ಶಕ್ತಿಯ ಪ್ರತೀಕವಾದ ಮುಖ್ಯಮಂತ್ರಿ ನಮ್ಮಲ್ಲಿದ್ದಾರೆ. ಹಾಗಾಗಿ ಮನುಷ್ಯನ ಶಕ್ತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ನಮಗೆ ನೀಡಬೇಕುʼ ಎಂದು ಅಲೆನ್ಸಿಯರ್ ಲೋಪೆಜ್ ಹೇಳಿದರು.

ಅಲೆನ್ಸಿಯರ್ ಲೋಪೆಜ್ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕರು ಇದನ್ನು ಲೈಂಗಿಕ ದೌರ್ಜನ್ಯ ಎನ್ನುವಂತೆ ಕರೆದಿದ್ದಾರೆ. ಈ ಕೂಡಲೇ ಸರ್ಕಾರ ಅವರಿಗೆ ಕೊಟ್ಟಿರುವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು