News Karnataka Kannada
Tuesday, April 30 2024
ಕೇರಳ

ಕೇರಳ: ವಿವಾಹ ಪೂರ್ವ ಕೌನ್ಸಿಲಿಂಗ್  ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸು

Kerala
Photo Credit : News Kannada

ಕಾಸರಗೋಡು : ದಾಂಪತ್ಯದಲ್ಲಿ ವಿರಸ  ,ಬಿರುಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಾಹ ಪೂರ್ವ ಕೌನ್ಸಿಲಿಂಗ್  ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ  ಪಿ . ಸತಿದೇವಿ ತಿಳಿಸಿದ್ದಾರೆ.

ವಿವಾಹ ನೋಂದಣಿ ಈಗ ಅನಿವಾರ್ಯವಾಗಿದೆ.  ಇದರ ಜೊತೆಗೆ ದಂಪತಿಗೆ ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಕಲಾಲಯ ಜ್ಯೋತಿ , ಫೇಸ್ ಟು  ಫೇಸ್  ಕಾರ್ಯಕ್ರಮಗಳ ಮೂಲಕ  ಕೌನ್ಸಿಲಿಂಗ್ ನೀಡಲಾಗುವುದು. ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕೆ   ಗ್ರಾಮ ಪಂಚಾಯತ್ ಮಟ್ಟದಲ್ಲಿ  ಖಾಯಂ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುವುದು . ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು  ಪ್ರತಿ ತಿಂಗಳು ಸಭೆ ಕರೆದು ಆಯಾ ಪ್ರದೇಶದ ಸಮಸ್ಯೆ ಗಳನ್ನು  ಪರಿಹರಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಕಚೇರಿ  ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಆಯೋಗ ಅದಾಲತ್ ನಲ್ಲಿ ಅವರು ಮಾತನಾಡುತ್ತಿದ್ದರು.

32 ದೂರು ಗ ಳನ್ನು  13  ದೂರುಗಳನ್ನು ಇತ್ಯರ್ಥ ಗೊಳಿಸಲಾಯಿತು. ನಾಲ್ಕು ದೂರುಗಳ  ಬಗ್ಗೆ  ಪೊಲೀಸರ ವರದಿ ಕೇಳಲು ತೀರ್ಮಾನಿಸಲಾಯಿತು.
15 ದೂರುಗಳ ಬಗ್ಗೆ  ಮುಂದಿನ  ಅದಾಲತ್ ನಲ್ಲಿ ತೀರ್ಮಾನ   ತೆಗೆದುಕೊಳ್ಳ ಲು  ನಿರ್ಧರಿಸಲಾಯಿತು .ಅದಾಲತ್ ನಲ್ಲಿ  ಮಹಿಳಾ  ಠಾಣಾಧಿಕಾರಿ ಭಾನುಮತಿ , ನ್ಯಾಯವಾದಿ ರೇಣುಕಾ ದೇವಿ , ನ್ಯಾಯವಾದಿ  ಟಿಟಿ ಮೋಲ್ ಕೆ .  ಜೂಲಿ ,ರಮ್ಯಮೋ ಳ್  ಮೊದಲಾದವರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು