News Karnataka Kannada
Friday, April 19 2024
Cricket
ಕೇರಳ

ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ ವೇಳೆ ನದಿಗೆ ಬಿದ್ದ ನವವಿವಾಹಿತರು; ವರನ ದುರಂತ ಅಂತ್ಯ

Marriage
Photo Credit :

ಕೇರಳ : ಕೇರಳದ ಜಾನಕಿಕಾಡು ಬಳಿಯ ಕುಟ್ಟಿಯಾಡಿ ನದಿಯಲ್ಲಿ ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್‌ ನಡೆಸುವ ವೇಳೆ ನವವಿವಾಹಿತರು ಬಂಡೆಯಿಂದ ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಮದುಮಗ ಮೃತಪಟ್ಟಿದ್ದು, ಮದುಮಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಇವರಿಬ್ಬರೂ ಬಂಡೆಯ ಮೇಲೆ ನಿಂತು ಪೋಟೋಗೆ ಫೋಸ್‌ ಕೊಡುತ್ತಿದ್ದರು. ಈ ವೇಳೆ ಜಾರಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಮೃತ ವ್ಯಕ್ತಿಯನ್ನು ರೆಜಿಲ್ ಎಂದು ಗುರುತಿಸಲಾಗಿದೆ. ಇನ್ನೂ ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಅಲ್ಲಿದ್ದವರು ಈಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವಧುವಿನ ಸ್ಥಿತಿ ಚಿಂತಾಜನಕವಾಗಿತ್ತು ಎನ್ನಲಾಗಿದೆ.

ಮಾರ್ಚ್ 14 ರಂದು ರೆಜಿಲ್ ಮತ್ತು ಕಾರ್ತಿಕಾ ವಿವಾಹವಾಗಿದ್ದರು. ದಂಪತಿಗಳು ಮದುವೆಯ ನಂತರದ ಫೋಟೋ ಶೂಟ್‌ಗಾಗಿ ನದಿಗೆ ತೆರಳಿದ್ದರು. ಈ ವೇಳೆ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಫೋಟೋ ಶೂಟ್ ಶುರುವಾಗಿದೆ. ಸ್ಥಳೀಯರ ಪ್ರಕಾರ, ದಂಪತಿಗಳು ಮತ್ತು ಛಾಯಾಗ್ರಾಹಕರು ನದಿಯ ಸುರಕ್ಷಿತವಲ್ಲದ ಸ್ಥಳದಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಎಂದಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು