News Karnataka Kannada
Monday, April 29 2024
ಜಮ್ಮು-ಕಾಶ್ಮೀರ

ಲೇಹ್‌ನಲ್ಲಿ ಬೈಕ್‌ ಸವಾರಿ ಮಾಡಿದ ರಾಹುಲ್‌ ಗಾಂಧಿ ತಮ್ಮ ತಂದೆಯ ಕುರಿತು ಹೇಳಿದ್ದೇನು

What Did Rahul Gandhi Say About His Father While Riding A Bike In Leh
Photo Credit : IANS

ಲೇಹ್: ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಕೆಟಿಎಂ 390 ಡ್ಯೂಕ್ ಮೋಟಾರ್‌ಬೈಕ್‌ನಲ್ಲಿ ಲೇಹ್ ನಗರದಿಂದ ಪ್ಯಾಂಗಾಂಗ್ ಸರೋವರಕ್ಕೆ ತೆರಳಿದರು. ಈ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಾಹುಲ್‌ ಹೀಗೆ ಹೇಳಿಕೊಂಡಿದ್ದಾರೆ.

ನಮ್ಮ ತಂದೆ ಯಾವಾಗಲೂ ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿಯನ್ನು ವಿಶ್ವದ ಅತಿ ಸುಂದರ ಸ್ಥಳಗಳಲ್ಲಿ ಒಂದು ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶುಕ್ರವಾರ ರಾಹುಲ್‌ ಅವರು ಲೇಹ್‌ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿ ಫುಟ್ಬಾಲ್‌ ಪಂದ್ಯಾಟದಲ್ಲಿ ಪಾಲ್ಗೊಂಡರು. ಭಾನುವಾರ ಅವರು ರಾಜೀವ್‌ ಗಾಂಧಿ ಅವರಿಗೆ ಪ್ಯಾಂಗಾಂಗ್ ಸರೋವರದಲ್ಲಿ ಗೌರವವಂದನೆ ಸಲ್ಲಿಸಲಿದ್ದಾರೆ. ನಂತರ ಕಾರ್ಗಿಲ್‌ಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವರ್ಷದ ಆರಂಭದಲ್ಲಿ ರಾಷ್ಟ್ರ ರಾಜಧಾನಿಯ ಕರೋಲ್ ಬಾಗ್ ಬೈಕ್ ಮಾರುಕಟ್ಟೆಗೆ ಕೆಟಿಎಂ ಡ್ಯೂಕ್‌ ಬೈಕ್‌ ನಲ್ಲಿಯೇ ಭೇಟಿ ನೀಡಿದ್ದರು. ಅಲ್ಲದೆ ಭದ್ರತೆಯ ಕಾರಣಕ್ಕೆ ನಾನು ಬೈಕ್‌ ನಲ್ಲಿ ಸಂಚಾರ ಮಾಡುವುದಿಲ್ಲ ಎಂದು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು