News Karnataka Kannada
Wednesday, May 01 2024
ಜಮ್ಮು-ಕಾಶ್ಮೀರ

ನುಸುಳುಕೋರರನ್ನು ತಡೆಯಲು ನಾವು ಸಿದ್ಧರಿದ್ದೇವೆ: ಬಿಎಸ್‌ಎಫ್

We are ready to stop infiltrators: BSF
Photo Credit : News Kannada

ಶ್ರೀನಗರ: ಗುಪ್ತಚರ ಇಲಾಖೆಯ ಪ್ರಕಾರ, ಪ್ರಸ್ತುತ ಭಾರತದ ಗಡಿಯೊಳಗೆ ನುಗ್ಗಲು 250ಕ್ಕೂ ಹೆಚ್ಚು ಭಯೋತ್ಪಾದಕರು ಪ್ರಯತ್ನಿಸುತ್ತಿದ್ದಾರೆ.

ಗಡಿಯಾಚೆಗಿನ ಲಾಂಚಿಂಗ್ ಪ್ಯಾಡ್‌ಗಳಲ್ಲಿ 250ಕ್ಕೂ ಹೆಚ್ಚು ಉಗ್ರರು ನೆಲೆಸಿದ್ದು ನಮಗೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಸೇನೆ ಹೇಳಿದೆ. ಮತ್ತೊಮ್ಮೆ ಪಾಕಿಸ್ತಾನದಿಂದ ನುಸುಳುಕೋರರನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ನುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ.  ನುಸುಳುಕೋರರು ಮತ್ತು ತರಬೇತಿ ಪಡೆಯುವವರನ್ನು ತಡೆಯಲು ನಾವು ಸಿದ್ಧರಿದ್ದೇವೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಆಕ್ರಮಿತ ಕಾಶ್ಮೀರದಲ್ಲಿರುವ ಲಾಂಚ್ ಪ್ಯಾಡ್‌ಗಳಲ್ಲಿ ಸುಮಾರು 250 ರಿಂದ 300 ಭಯೋತ್ಪಾದಕ ಗಡಿ ದಾಟಲು ಕಾದುಕುಳಿತಿದ್ದಾರೆ. ಹೀಗಾಗಿ ಗಡಿಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು