News Karnataka Kannada
Monday, April 29 2024
ಜಮ್ಮು-ಕಾಶ್ಮೀರ

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರೇ ಇರಲಿಲ್ಲ ಎಂದ ಗುಲಾಂ ನಬಿ ಆಜಾದ್

There were no Muslims in Kashmir 600 years ago: Ghulam Nabi Azad
Photo Credit : News Kannada

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಗುಲಾಂ ನಬಿ ಆಜಾದ್‌ ನೀಡಿದ ಹೇಳಿಕೆಯೊಂದು ಭಾರಿ ವೈರಲ್ ಆಗಿದೆ. ಕಾಂಗ್ರೆಸ್‌ ಮಾಜಿ ನಾಯಕನ ಹೇಳಿಕೆಯ ವಿಡಿಯೋ ವೈರಲ್‌ ಆಗಿದೆ.

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ ಮತ್ತು ಹೆಚ್ಚಿನ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದೂ ಗುಲಾಂ ನಬಿ ಆಜಾದ್ ಹೇಳಿದರು. “ಎಲ್ಲರೂ ಹಿಂದೂ ಧರ್ಮದಲ್ಲಿ ಜನಿಸಿದರು” ಎಂದು ಅವರು ಹೇಳಿದರು. ಅಲ್ಲದೆ, ನಾವೆಲ್ಲರೂ ಒಟ್ಟಾಗಿ ಹಿಂದೂ, ಮುಸ್ಲಿಂ, ರಜಪೂತ, ದಲಿತ, ಕಾಶ್ಮೀರಿ, ಗುಜ್ಜರ್, ಎಲ್ಲರೂ ಒಗ್ಗೂಡಿ ಇದನ್ನು ನಮ್ಮ ಮನೆಯಾಗಿಸಬೇಕು ಎಂದೂ ಗುಲಾಂ ನಬಿ ಆಜಾದ್‌ ಹೇಳಿದರು.

ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ. ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು, ಉಳಿದವರೆಲ್ಲ ಮತಾಂತರಗೊಂಡರು’’ ಎಂದೂ ಕಾಂಗ್ರೆಸ್‌ ಮಾಜಿ ನಾಯಕರು ಹೇಳಿದರು.

“ಇದು ನಮ್ಮ ಮನೆ, ಯಾರೂ ಹೊರಗಿನಿಂದ ಬಂದಿಲ್ಲ. ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಮತ್ತು ಇಲ್ಲಿಯೇ ಸಾಯುತ್ತೇವೆ ಎಂದೂ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. “ನಾನು ಸಂಸತ್ತಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ ಅದು ನಿಮಗೆ ತಲುಪಲಿಲ್ಲ. ಕೆಲವರು ಹೊರಗಿನಿಂದ ಬಂದವರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದು, ನಾನು ಒಳಗಿನಿಂದ ಅಥವಾ ಹೊರಗಿನಿಂದ ಬಂದಿಲ್ಲ ಎಂದು ಹೇಳಿದೆ. ಭಾರತದಲ್ಲಿ, ಜಗತ್ತಿನಲ್ಲಿ ಇಸ್ಲಾಂ ಧರ್ಮವು 1500 ವರ್ಷಗಳ ಹಿಂದೆ ಬಂದಿತು, ಹಿಂದೂ ಧರ್ಮವು ತುಂಬಾ ಪುರಾತನವಾದುದು’’ ಎಂದೂ ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು