ಜಮ್ಮು ಕಾಶ್ಮೀರದಲ್ಲಿ ನಾಲ್ವರ ಭಯೋತ್ಪಾದಕರ ಬಂಧನ : ಶಸ್ತ್ರಾಸ್ತ್ರ ವಶ

ಶ್ರೀನಗರ: ಶ್ರೀನಗರದಲ್ಲಿ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆ ಬಂಧಿಸಿರುವ ಘಟನೆ ನಡೆದಿದೆ.

ನಿರ್ದಿಷ್ಟ ಮಾಹಿತಿಯ ಮೇರೆಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ನಾಲ್ವರು ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಶನಿವಾರ ಸಂಜೆ ನಗರದ ಹೊರವಲಯದಲ್ಲಿರುವ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ, ಭದ್ರತಾ ಪಡೆಗಳು ವಾಹನವನ್ನು ತಡೆದು ನಾಲ್ವರನ್ನು ಬಂಧಿಸಲಾಯಿತು ಎಂದು ಸೇನೆಯ ವಕ್ತಾರರು ಮಾಹಿತಿಯನ್ನು ತಿಳಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಿದ್ದಾರೆ. ಬಂಧಿತರು ಲಕ್‍ನಂಬಲ್ ಜಫ್ರಾನ್ ಕಾಲೋನಿ ಪಂಥಾ ಚೌಕ್ ಮತ್ತು ಫ್ರೆಸ್ಟಾಬಲ್ ಪಾಂಪೋರ್‌ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಬಂಧಿತ ಉಗ್ರರಿಂದ ಮೂರು ಮ್ಯಾಗಜೀನ್‍ಗಳು, ಎಕೆ 56 ರೈಫಲ್, 7.62, 39 ಎಂಎಂನ 75 ಸುತ್ತುಗಳು, ಎರಡು ಮ್ಯಾಗಜೀನ್‍ಗಳಿರುವ ಗ್ಲೋಕ್ ಪಿಸ್ತೂಲ್, 9 ಎಂಎಂನ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ನಂಟು ಹೊಂದಿರುವ ಮಾಹಿತಿ ತಿಳಿದು ಬಂದಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Chaitra Kulal

Recent Posts

ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ : ಟಿಶ್ಯೂ ಪೇಪರ್‌ನಲ್ಲಿತ್ತು ಸಂದೇಶ

ಶಾಲೆಗಳ ಬಾಂಬ್‌ ಬೆದರಿಕೆ ಬೆನ್ನಲ್ಲೆ ಇದೀಗ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಬೆದರಿಕೆ ಹಾಕಲಾಗಿದ್ದು ಟಾಯ್ಲೆಟ್​ನಲ್ಲಿದ್ದ ಟಿಶ್ಯೂ ಪೇಪರ್‌ನಲ್ಲಿ ಬೆದರಿಕೆ…

30 mins ago

ಸಾಕು ನಾಯಿ ವಿಚಾರಕ್ಕೆ ಮಾಲೀಕನಿಗೆ ಐವರಿಂದ ಹಲ್ಲೆ: ಆರೋಪಿಗಳು ಅರೆಸ್ಟ್‌

ಸಾಕು ನಾಯಿ ವಿಚಾರಕ್ಕೆ ಏಕಾಏಕಿ ಐವರು ನಾಯಿ ಮತ್ತು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ…

56 mins ago

ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು: ಫ್ಯಾನ್ಸ್​ ಶಾಕ್!

ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು.…

1 hour ago

ಬಾತ್​ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ !

ನಗರದಲ್ಲಿ​ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. 21 ವರ್ಷ ವಯಸ್ಸಿನ ಪ್ರಭುದ್ಧ ಎಂಬ ಯುವತಿ ಸಾವನ್ನಪ್ಪಿದ್ದಾಳೆ.

2 hours ago

ಅಂಜಲಿ‌ ಕೊಲೆ‌ ಕೇಸ್‌ ನಲ್ಲಿ ಕರ್ತವ್ಯ ಲೋಪ : ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

ಅಂಜಲಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ, ಬೆಂಡಿಗೇರಿ ಪೊಲೀಸ್‌ ಇನ್ಸ್‌ಪೆಕ್ಟರ್ ಸೇರಿ ಓರ್ವ ಸಿಬ್ಬಂದಿಯನ್ನು ಪೊಲೀಸ್ ಕಮೀಷನ‌ರ್ ಅಮಾನತು ಮಾಡಿ ಆದೇಶ…

2 hours ago

ಮಹತ್ವದ ತೀರ್ಪಿನಲ್ಲಿ ಇಡಿ ಕಾರ್ಯಗಳಿಗೆ ಕಡಿವಾಣ ಹೇರಿದ ಸುಪ್ರೀಂ ಕೋರ್ಟ್‌ !

ಅತ್ಯಂತ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯದ ಕಾರ್ಯಗಳಿಗೆ ಕಡಿವಾಣ ಹೇರಿದೆ. ಯಾವುದೇ ವ್ಯಕ್ತಿ ವಿರುದ್ಧ ದಾಖಲಾದ ಅಕ್ರಮ…

2 hours ago