ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದುವರಿದ ನಾಗರೀಕರ ಹತ್ಯೆ: ಸ್ಥಳೀಯರಲ್ಲಿ ಆತಂಕ ಛಾಯೆ

ಜಮ್ಮು ಮತ್ತು ಕಾಶ್ಮೀರ : ನಾಗರೀಕರ ಹತ್ಯೆ ಮುಂದುವರದಿದ್ದು, ಇಲ್ಲಿನ ಸ್ಥಿತಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್​ಕೌಂಟರ್​  ಮುಂದುವರೆದಿದ್ದು, ನಿನ್ನೆ ಇಬ್ಬರು ಉಗ್ರರನ್ನುಹತ್ಯೆ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಪರಿಣಾಮ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಕಳುಹಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಕಣಿವೆ ರಾಜ್ಯದ ನಾಗರಿಕರಿಗೆ ಭದ್ರತೆ ನೀಡಲು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತರ ಪಡೆಗಳಿಗೆ ಸಹಾಯ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 25 ಹೆಚ್ಚು ಪಡೆಗಳ ಸೈನ್ಯವನ್ನು ಕಳುಹಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಆದೇಶ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಹಂತ ಹಂತವಾಗಿ ಸೇನಾ ಪಡೆ ರವಾನೆ

ಜಮ್ಮು ಮತ್ತು ಕಾಶ್ಮೀರಕ್ಕೆ ಹಂತ ಹಂತವಾಗಿ ಸಿಆರ್​ಪಿಎಫ್​ನ (CRPF) ಹೆಚ್ಚುವರಿ ಪಡೆಗಳುನ್ನು ಕಳುಹಿಸಲಾಗುವುದು. ಮೊದಲ ಹಂತದಲ್ಲಿ 10 ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುವುದು ಮುಂದಿನ ಎರಡು ಹಂತದಲ್ಲಿ ಉಳಿದ 15 ಪಡೆಗಳನ್ನು ಕಳುಹಿಸಲಾಗವುದು

ಶೀಘ್ರದಲ್ಲೇ ಅಧಿಕೃತ ಆದೇಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ದೇಶದ ವಿವಿಧ ಭಾಗಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಆರ್​ಪಿಎಫ್​ ಪಡೆಗಳನ್ನು ಕರೆಸಿಕೊಂಡು ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುವುದು. ಶೀಘ್ರದಲ್ಲೇ, ಈ ಸಂಬಂಧ ಭಾರತೀಯ ಸೇನೆ ಅಧಿಕೃತ ಆದೇಶ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

ಈಗಾಗಲೇ ಕಣಿವೆ ರಾಜ್ಯಕ್ಕೆ ಆಗಮಿಸುವ 25ಕ್ಕೂ ಹೆಚ್ಚು ಸಿಆರ್​​ಪಿಎಫ್​ ಪಡೆಗಳಿಗೆ, ವಸತಿ, ಸಾರಿಗೆ ಇತ್ಯಾದಿಗಳ ವ್ಯವಸ್ಥೆ ಈಗಾಗಲೇ ಆರಂಭವಾಗಿದೆ. ಯಾವ ಪಡೆಗಳನ್ನು ಕರೆಸಿಕೊಳ್ಳುವುದು ಎಂಬ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ವ್ಯವಸ್ಥೆಗೆ ಮುಂದಾಗಲಾಗಿದೆ.

ಅ. 25- 26ಕ್ಕೆ ಕಣಿವೆ ರಾಜ್ಯಕ್ಕೆ ಅಮಿತ್​ ಶಾ

ಡಿಜಿ ಸಿಆರ್‌ಪಿಎಫ್ ಕುಲದೀಪ್ ಸಿಂಗ್ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಮೇಲ್ವಿಚಾರಣಾ ಕಾರ್ಯಾಚರಣೆ ನಡೆಸಿದ್ದು, ಅತಿದೊಡ್ಡ ಅರೆಸೇನಾ ಪಡೆಯ ಇತರ ಉನ್ನತ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ. ಅ. 23 ಮತ್ತು 25ಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅಲ್ಲಿಯವರೆಗೂ ಡಿಜಿ ಅಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.

ಕಳೆದ 15ದಿನದಲ್ಲಿ 15 ಭಯೋತ್ಪಾದಕರ ಹತ್ಯೆ

ಬುಧವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್​​ಕೌಂಟರ್​ನಲ್ಲಿ ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಪ್ರದೇಶದಲ್ಲಿ ಉಗ್ರರು ಇರುವುದರ ಬಗ್ಗೆ ಮಾಹಿತಿ ಪಡೆದ ನಂತರ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ಭಾರತೀಯ ಸೇನೆಯ ಸುದೀರ್ಘ ಕಾರ್ಯಾಚರಣೆ ಮಾಂಧರ್ ಸೆಕ್ಟರ್‌ನಲ್ಲಿ ನಡೆಯುತ್ತಿದೆ. ಕಳೆದ ಎರಡು ವಾರಗಳಲ್ಲಿ ಒಟ್ಟು 15 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಕಳೆದ 15 ದಿನಗಳಲ್ಲಿ 11 ನಾಗರಿಕರು ಸಾವನ್ನಪ್ಪಿದ್ದು, ಇವರು ಸ್ಥಳೀಯರಲ್ಲ ಎನ್ನಲಾಗಿದೆ.

Gayathri SG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

6 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

6 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

6 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

8 hours ago