ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದರಂಗ್ ಬಾಲ್ ಲ್ಲಿ ಎನ್ ಕೌಂಟರ್ ಸಂಭವಿಸಿದ್ದು, ಇದರಲ್ಲಿ ಒಬ್ಬ ಎಲ್ ಇಟಿ ಕಮಾಂಡರ್ ನನ್ನು ಸೆರೆಹಿಡಿಯಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾಶ್ಮೀರದ ಐಜಿ ವಿಜಯ್ ಕುಮಾರ್, ತಡರಾತ್ರಿ ನಡೆದ ಭದ್ರತಾಪಡೆಯ ಎನ್ ಕೌಂಟರ್ ನಲ್ಲಿ ಟಾಪ್ 10 ಉಗ್ರರ ಪಟ್ಟಿಯಲ್ಲಿದ್ದ ಎಲ್ ಇಟಿ ಕಾಮಾಂಡರ್ ಉಮರ್ ಮುಸ್ತಾಕ್ ಖಾಂಡೇ ಸಿಕ್ಕಿಬಿದ್ದಿದ್ದಾನೆ.
ಈತ ಶ್ರೀನಗರ, ಬಾಘತ್ ಪ್ರದೇಶಗಳಲ್ಲಿನ ಇಬ್ಬರು ಪೊಲೀಸ್ ಸಿಬ್ಬಂದಿಯ ಹತ್ಯೆ ಹಾಗೂ ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.