ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ನ ಸುನ್ನರ್ಗುಂಡ್ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LET) ಜೊತೆ ಸಂಬಂಧ ಹೊಂದಿರುವ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೊಲೀಸರು, ಭಯೋತ್ಪಾದಕರು ವಸೀಮ್ ಎ ಗನೈ ಮತ್ತು ಇಕ್ಬಾಲ್ ಎ ಶೇಖ್ ಎಂದು ಗುರುತಿಸಲಾಗಿದೆ. ಅವರಿಂದ ದೋಷಾರೋಪಣೆ ಸಾಮಗ್ರಿಗಳು, ಚೈನೀಸ್ ಪಿಸ್ತೂಲ್, ಎರಡು ಪಿಸ್ತೂಲ್ ಮ್ಯಾಗಜೀನ್ಗಳು, 12 ಪಿಸ್ತೂಲ್ ರೌಂಡ್ಗಳು, 32 ಎಕೆ 47 ರೌಂಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ .
ಇನ್ನು ಬಂಧಿತ ಭಯೋತ್ಪಾದಕ ಸಹಚರರು ಲಾಜಿಸ್ಟಿಕ್ಸ್, ಆಶ್ರಯ ಮತ್ತು ಹೈಬ್ರಿಡ್ ಭಯೋತ್ಪಾದಕರಾಗಿ ಕಾರ್ಯನಿರ್ವಹಿಸಲು ಯುವಕರನ್ನು ಪ್ರೇರೇಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.