ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರ ಪತ್ನಿ ಡಾ.ಸಿಮ್ಮಿ ಅಗ್ನಿಹೋತ್ರಿ ತಡರಾತ್ರಿ ಹಠಾತ್ ನಿಧನರಾಗಿದ್ದಾರೆ.
ಸಿಮ್ಮಿ ಅಗ್ನಿಹೋತ್ರಿ ಅವರ ಆರೋಗ್ಯವು ನಿನ್ನೆ ಡಿಢೀರ್ ಹದಗೆಟ್ಟಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರೊಫೆಸರ್ ಆಗಿದ್ದ ಸಿಮ್ಮಿ ಅಗ್ನಿಹೋತ್ರಿ, ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಮುಖೇಶ್ ಅಗ್ನಿಹೋತ್ರಿ ಮತ್ತು ಸಿಮ್ಮಿ ಅಗ್ನಿಹೋತ್ರಿ ಅವರದ್ದು ಪ್ರೇಮ ವಿವಾಹ. ಸಿಮ್ಮಿ ಅಗ್ನಿಹೋತ್ರಿ ಅವರನ್ನು 8 ಏಪ್ರಿಲ್ 1992 ರಂದು ಮದುವೆಯಾಗಿದ್ದರು.