News Karnataka Kannada
Tuesday, April 30 2024
ಹರ್ಯಾಣ

10 ನೇ ತರಗತಿ ಪರೀಕ್ಷೆ ಬರೆದ ಹರ್ಯಾಣ ಮಾಜಿ ಮುಖ್ಯ ಮಂತ್ರಿ ಒಂ ಪ್ರಕಾಶ್‌ ಚೌಟಾಲ

Om Prakash Chautala
Photo Credit :

ಹೊಸದಿಲ್ಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರು 10 ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ಚೌಟಾಲಾ ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ಪರೀಕ್ಷೆಗೆ ಹಾಜರಾಗಿದ್ದರು. ಕೈ ಫ್ರಾಕ್ಚರ್ ಆಗಿದ್ದ ಕಾರಣ ಬೇರೊಬ್ಬರ ಸಹಾಯದೊಂದಿಗೆ ಚೌಟಾಲಾ ಪರೀಕ್ಷೆ ಬರೆದರು.
ಇಂಡಿಯನ್ ನ್ಯಾಷನಲ್ ಲೋಕ್ ದಳದ (INLD) ಅಧ್ಯಕ್ಷರಾಗಿರುವ 86ರ ಹರೆಯದ ಚೌಟಾಲಾ ಪರೀಕ್ಷೆಯನ್ನು ಎರಡು ಗಂಟೆಗಳಲ್ಲಿ ಮುಗಿಸಿ ಹೊರಟು ಹೋದರು ಎಂದು ಎನ್​​ಡಿಟಿವಿ ವರದಿ ಮಾಡಿದೆ.
ಈ ವರ್ಷದ ಆರಂಭದಲ್ಲಿ ಚೌಟಾಲಾ ಅವರು 12ನೇ ತರಗತಿಯ ಪರೀಕ್ಷೆ ಬರೆದಿದ್ದರು. ಆದರೆ, ಇನ್ನೂ 10ನೇ ತರಗತಿಯ ಕಡ್ಡಾಯ ಇಂಗ್ಲಿಷ್ ಪರೀಕ್ಷೆಯನ್ನು ತೆಗೆದುಕೊಳ್ಳದ ಕಾರಣ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ತನ್ನ 12 ನೇ ತರಗತಿಯ ಫಲಿತಾಂಶ ಪಡೆಯಬೇಕಾದರೆ ಚೌಟಾಲಾ ಕಡ್ಡಾಯವಾಗಿ 10ನೇ ತರಗತಿ ಇಂಗ್ಲಿಷ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಚೌಟಾಲಾ ಅವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆ ವೇಳೆ ಅವರ ಮಗ ಅಭಯ್ ಚೌಟಾಲಾ ತನ್ನ ತಂದೆ 12 ನೇ ತರಗತಿಯ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು, ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಗಾರರಿಗೆ ಹೇಳಿದ್ದರು. ಆದರೆ ಅದು ಚೌಟಾಲಾ ಅವರ 10 ನೇ ತರಗತಿ, 12 ನೇ ತರಗತಿಯ ಪರೀಕ್ಷೆಯಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು