ಹರ್ಯಾಣ

ಹರ್ಯಾಣ: ಗುಡ್ಡ ಕುಸಿದ ಪರಿಣಾಮ ನಾಲ್ವರು ಹುಡುಗಿಯರು ಸಾವು, ಒಬ್ಬರಿಗೆ ಗಾಯ

ಹರ್ಯಾಣ : ಬೃಹತ್​ ಮಣ್ಣಿನ ಗುಡ್ಡ ಕುಸಿದು ನಾಲ್ವರು ಹುಡುಗಿಯರು ಜೀವಂತ ಸಮಾಧಿಯಾದ ದುರ್ಘಟನೆ ಹರ್ಯಾಣ(Haryana)ದ ನುಹ್​ ಜಿಲ್ಲೆಯ  ಹಳ್ಳಿಯೊಂದರಲ್ಲಿ ನಡೆದಿದೆ.

ಇನ್ನೊಬ್ಬಳು ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಎಲ್ಲ ಹುಡುಗಿಯರೂ ತಾವೂರು ಉಪವಿಭಾಗದ ಕಂಗರ್ಕ ಗ್ರಾಮದವರು. ಇವರೆಲ್ಲ ತಮ್ಮ ಮನೆಗಳ ಕೆಲಸಕ್ಕೆ ಮಣ್ಣು ತರಲೆಂದು ಹೋಗಿದ್ದರು. ಆದರೆ ಮಣ್ಣುಗುಡ್ಡದ ದೊಡ್ಡದೊಂದು ತುಂಡು ಅವರ ಮೈಮೇಲೆ ಬಿದ್ದಿದೆ. ಸ್ಥಳೀಯರೇ ಹುಡುಗಿಯರನ್ನು ಮಣ್ಣಿನಡಿಯಿಂದ ಹೊರಗೆ ತೆಗೆದಿದ್ದಾರೆ. ಆದರೆ ಒಬ್ಬಳು ಮಾತ್ರ ಬದುಕಿದ್ದು ಗಾಯಗೊಂಡಿದ್ದಾರೆ.

ವಕೀಲಾ (19), ತಸ್ಲೀಮಾ (11), ಜನಿಸ್ಟಾ (17) ಮತ್ತು ಗುಲಫ್ಶಾ (9) ಎಂಬುವರು ಮೃತರಾಗಿದ್ದು, ಸೋಫಿಯಾ (8) ಗಾಯಗೊಂಡಿದ್ದಾರೆ. ನಾಲ್ವರೂ ಬಾಲಕಿಯರು ಉಸಿರುಕಟ್ಟಿಯೇ ಸತ್ತಿದ್ದಾರೆ. ಸೋಫಿಯಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಅಲ್ಲಿ ಮಣ್ಣಿನ ಗುಡ್ಡ ಕುಸಿದಿದ್ದು ಹೇಗೆಂಬ ತನಿಖೆ ನಡೆಸಲಾಗುತ್ತಿದೆ. ಸದ್ಯ ಮೃತ ಹುಡುಗಿಯರ ಮನೆಯವರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಅದನ್ನೊಂದು ಆಯಕ್ಸಿಡೆಂಟ್​ ಎಂದೇ ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಏನೋ ಕೆಲಸಕ್ಕೆಂದು ಮಣ್ಣು ಬೇಕಿತ್ತು. ಹಾಗಾಗಿ ಹುಡುಗಿಯರೆಲ್ಲ ಒಟ್ಟಾಗಿ ಅದನ್ನು ತರಲೆಂದು ಹೋಗಿದ್ದರು. ಅವರು ಅಗೆಯುತ್ತಿದ್ದಂತೆ ಮಣ್ಣಿನ ಗುಡ್ಡದ ಒಂದು ಬದಿ ಕುಸಿದು ಅವರ ಮೈಮೇಲೆ ಬಿತ್ತು. ಅದರಲ್ಲಿ ಸೋಫಿಯಾ ಎಂಬಾಕೆ ಇದ್ದುದರಲ್ಲೇ ತಪ್ಪಿಸಿಕೊಂಡು ಕಷ್ಟಪಟ್ಟು ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಸಮೀಪಿದಲ್ಲಿ ಇದ್ದವರೆಲ್ಲ ಹೋಗಿ ಎಲ್ಲರನ್ನೂ ಹೊರಗೆಳೆದಿದ್ದಾರೆ. ಇದು ಒಂದು ಆಯಕ್ಸಿಡೆಂಟ್ ಆಗಿದ್ದು ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮದ ಸರ್​ಪಂಚ್​ ಮುಷ್ಟ್ಕಿಮ್ ತಿಳಿಸಿದ್ದಾರೆ. ಗಾಯಗೊಂಡ ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಉಳಿದ ನಾಲ್ವರ ಶವವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ.

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

6 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

6 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

7 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago