Categories: ಹರ್ಯಾಣ

ಜ.12 ರವರೆಗೆ ಹರಿಯಾಣದಲ್ಲಿ ಕಾಲೇಜ್ ಬಂದ್: ಎಂದಿನಂತೆ ನಡೆಯಲಿವೆ ಆನ್‌ಲೈನ್ ಕ್ಲಾಸ್ !

ದೇಶಾದ್ಯಂತ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಇದರ ಜತೆಗೆ ಒಮಿಕ್ರಾನ್ ಪ್ರಕರಣವೂ ಸೇರಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ. ಇದರ ಬೆನ್ನಲ್ಲೇ ಹರಿಯಾಣದಲ್ಲಿ ಎಲ್ಲ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಭೌತಿಕ ತರಗತಿಯನ್ನು ಜನವರಿ 12 ರವರೆಗೆ ನಿರ್ಬಂಧಿಸಲಾಗಿದೆ.

ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ ಎಂದು ಹರಿಯಾಣ ಶಿಕ್ಷಣ ಇಲಾಖೆ ತಿಳಿಸಿದೆ. ಅಧಿಕೃತ ಆದೇಶ ಹೊರಬಿದ್ದಿದ್ದು, ಜನವರಿ 12 ರವರೆಗೆ ತರಗತಿಗಳು ಮುಚ್ಚಿರಲಿವೆ. ಆದರೆ ಸಿಬ್ಬಂದಿ ಮಾತ್ರ ಎಂದಿನಂತೆ ವಿಶ್ವವಿದ್ಯಾಲಯಕ್ಕೆ ಬರಬೇಕು. ಅಲ್ಲದೇ ಆನ್‌ಲೈನ್ ತರಗತಿಗಳು ಎಂದಿನಂತೆ ನಡೆಯಲಿವೆ ಎಂದು ತಿಳಿಸಲಾಗಿದೆ.

ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೇಗವಾಗಿ ಸೋಂಕು ಹರಡುವ ಭೀತಿ ಇದೆ. ಈ ಕಾರಣದಿಂದ ಭೌತಿಕ ತರಗತಿಗಳನ್ನು ಬಂದ್ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಹಾಸ್ಟೆಲ್‌ಗಳಲ್ಲಿ ಉಳಿಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.

Sneha Gowda

Recent Posts

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

17 mins ago

ಬೆಂಗಳೂರು ಮೆಟ್ರೋದಲ್ಲಿ ರೋಮ್ಯಾನ್ಸ್; ವಿಡಿಯೋ ವೈರಲ್

ದೆಹಲಿಯ ಮೆಟ್ರೋ ದಲ್ಲಿ ರೊಮ್ಯಾನ್ಸ್ ನಡೆಸುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೂ ಇದೇ ಚಾಳಿ ಪ್ರಾರಂಭವಾಗಿದ್ದು,…

24 mins ago

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಎನ್‌ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ…

30 mins ago

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ…

46 mins ago

ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಪಲ್ಟಿ: ಇಬ್ಬರು ವೃದ್ಧರು ಮೃತ್ಯು

ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿ, ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ…

59 mins ago

ಆರ್​ಸಿಬಿ ಮುಂದಿದೆ ಬಿಗ್ ಟಾರ್ಗೆಟ್; ಫ್ಯಾನ್ಸ್ ನಿಂದ ಕ್ಯಾಲ್ಕುಲೇಟರ್​ ಹಿಡಿದು ಲೆಕ್ಕಾಚಾರ

ಸೋತು ಸುಣ್ಣವಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಂಪ್​ ಇದೀಗ ಫುಲ್​ ಜೋಶ್​ನಲ್ಲಿದೆ. ಹ್ಯಾಟ್ರಿಕ್​ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ.…

1 hour ago