News Karnataka Kannada
Wednesday, April 24 2024
Cricket
ಹರ್ಯಾಣ

ಹರ್ಯಾಣ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ರಕ್ಷಿಸಿದ ಮಗ

Davanagere: Youth consumed poison after murdering woman, dies
Photo Credit : IANS

ಫತೇಹಾಬಾದ್( ಹರ್ಯಾಣ) : ಹರ್ಯಾಣ ಸರ್ಕಾರ ಆರಂಭಿಸಿರುವ ಡಯಲ್ ನಂಬರ್‌ 112 ಸೇವೆ ಈಗ ಜನರಿಗೆ ವರದಾನವಾಗಿದೆ. ಹೌದು, 11 ವರ್ಷದ ಬಾಲಕನೋರ್ವ ಈ ನಂಬರ್‌ಗೆ ಕಾಲ್‌ ಮಾಡಿ ನನ್ನ ತಾಯಿ ವಿಷ ಸೇವಿಸಿದ್ದಾರೆ ಎಂದು ಹೇಳಿದ್ದಾನೆ. ವಿಷಯ ತಿಳಿದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿರುವ ಘಟನೆ ಬೆಳಕಿಗೆ ಬಂದಿದೆ.

ತೇಹಾಬಾದ್‌ನ ದರಿಯಾಪುರ ಗ್ರಾಮದ ಬಳಿ ಇರುವ ಧನಿ ಮಹತಾಬ್‌ನಲ್ಲಿ 11 ವರ್ಷದ ಬಾಲಕನೊಬ್ಬ 112 ಗೆ ಕರೆ ಮಾಡಿ ತನ್ನ ತಾಯಿ ವಿಷ ಸೇವಿಸಿದ್ದಾಳೆ. ಆಕೆಯನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾನೆ.

ವಿಷಯ ತಿಳಿದ ಡಯಲ್ 112 ಉದ್ಯೋಗಿ ಮಖನ್ ಸಿಂಗ್ ತನ್ನ ತಂಡದೊಂದಿಗೆ ತಕ್ಷಣವೇ ಸ್ಥಳಕ್ಕೆ ಆಗಮಿಸಿ ನರಳುತ್ತಿರುವ ಮಹಿಳೆಯನ್ನು ಎತ್ತಿಕೊಂಡು ಕಾರಿನಲ್ಲಿ ಸಿವಿಲ್ ಆಸ್ಪತ್ರೆಗೆ ಸೇರಿಸಿದರು. ಸದ್ಯ ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆಯನ್ನು ಸೋಮಾ ದೇವಿ ಎಂದು ಗುರುತಿಸಲಾಗಿದೆ. ಈ ವಿಷಯವನ್ನು ಮಹಿಳೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮಹಿಳೆಯು ವಿಷ ಸೇವಿಸಲು ಲಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು