News Karnataka Kannada
Monday, April 29 2024
ಗುಜರಾತ್

ಗುಜರಾತ್‌: ಹಾಡಹಗಲೇ ಎಲ್ಲರ ಮುಂದೆ ಯುವತಿಯನ್ನು ಕೊಲೆ ಮಾಡಿದ ಯುವಕ

Murder
Photo Credit :

ಗುಜರಾತ್‌ : ಸಮಾಜವನ್ನೇ ಬೆಚ್ಚಿಬೀಳಿಸುವ ಘಟನೆ ಗುಜರಾತ್‌ನ ಸೂರತ್‌ನ ಕಮ್ರೇಜ್ ಬಳಿಯ ಪಸೋದರ ಎಂಬಲ್ಲಿ ನಡೆದಿದೆ. ಇಲ್ಲಿ 21 ವರ್ಷದ ಯುವತಿಯನ್ನು ಹಾಡಹಗಲೇ ಎಲ್ಲರ ಮುಂದೆ ಕೊಲೆ ಮಾಡಲಾಗಿದೆ. ಯುವತಿಯನ್ನು ಪ್ರೀತಿಸುತ್ತಿದ್ದ ಆತ ಅವಳನ್ನು ಪಡೆಯುವ ಆಸೆಯಲ್ಲಿ ಅಮಾನವೀಯತೆಯನ್ನು ಮರೆತಿದ್ದ.

ಯುವತಿಯ ರಕ್ಷಿಸಲು ಯತ್ನಿಸುತ್ತಿದ್ದ ಆಕೆಯ ಸಹೋದರನಿಗೂ ಆರೋಪಿ ಚಾಕುವಿನಿಂದ ಇರಿದಿದ್ದಾರೆ. ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಇದೀಗ ಹಂತಕನನ್ನು ಗಲ್ಲಿಗೇರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಅವನ ಹೆಸರು ಫೆನಿಲ್ ಎಂದು ತಿಳಿದುಬಂದಿದೆ. ಪೊಲೀಸರು ನೀಡಿದ ಮಾಹಿತಿಯಂತೆ ಯುವಕನನ್ನು ಬಂಧಿಸಲಾಗಿದೆ. ಯುವತಿಯ ಕತ್ತು ಸೀಳಿದ ಫೆನಿಲ್ ಯಾರ ಮಾತನ್ನೂ ಕೇಳದೇ ಈ ಕೃತ್ಯ ಎಸಗಿದ್ದಾನೆ. ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ, ನಿದ್ದೆ ಮಾತ್ರೆ ಸೇವಿಸಿದ್ದಾನೆ. ನಂತರ ಫೆನಿಲ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಅಲ್ಲಿಂದ ನಿನ್ನೆ(ಮಂಗಳವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಫೆನಿಲ್‌ನನ್ನು ಕಾಮ್ರೇಜ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ಹಲವು ವಿಡಿಯೋಗಳು ಹೊರಬಿದ್ದಿವೆ.

ಯುವತಿಯನ್ನು ಕೊಲ್ಲಲು ಯತ್ನಿಸಿದಾಗ ಜನರು ಅವನನ್ನು ತಡೆಯಲು ಪ್ರಯತ್ನಿಸಿದ್ದಾದರೂ ಅವನು ಯಾರ ಮಾತನ್ನೂ ಕೇಳದೇ ಯುವತಿಯ ಕತ್ತು ಸೀಳಿದ್ದಾನೆ. ಇದೇ ವೇಳೆ ಬಾಲಕಿಯ ಕುಟುಂಬಸ್ಥರ ಮೇಲೂ ಹಲ್ಲೆ ನಡೆದಿದೆ. ಯುವತಿಯ ಹತ್ಯೆಯ ನಂತರ ಸ್ಥಳದಲ್ಲಿ ಭಾರೀ ಜನ ಜಮಾಯಿಸಿದ್ದರು. ಬಳಿಕ ಯುವತಿಯ ಅಂತಿಮ ಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಸಂದರ್ಭದಲ್ಲಿ, ನಗರದಾದ್ಯಂತ ಚರ್ಚೆಗಳು ಮುಂದುವರೆದವು. ಈಗ ಜನರು ಹಂತಕನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು