News Karnataka Kannada
Sunday, April 21 2024
Cricket
ಗುಜರಾತ್

ಮಹಿಳೆಯ ಹೊಟ್ಟೆಯಿಂದ 47 ಕೆ.ಜಿ. ತೂಕದ ಗೆಡ್ಡೆ ಹೊರತೆಗೆದ ವೈದ್ಯರು

Doctor
Photo Credit : IANS

ಅಹಮದಾಬಾದ್ : 56 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 47 ಕೆ.ಜಿ. ತೂಕದ ಗೆಡ್ಡೆ ತೆಗೆದಿರುವ ವೈದ್ಯರು ಆಕೆಗೆ ಹೊಸ ಜೀವನವನ್ನು ನೀಡಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿದ್ದ 47 ಕೆಜಿ ಗಡ್ಡೆಯನ್ನು ಹೊರತೆಗೆದಿದ್ದಾರೆ. ಗಡ್ಡೆಯ ಕಾರಣದಿಂದಾಗಿ ಮಹಿಳೆಯ ತೂಕವು ದ್ವಿಗುಣಗೊಂಡಿತ್ತು. 47 ಕೆ.ಜಿ. ತೂಕದ ಗೆಡ್ಡೆ ತೆಗೆದ ನಂತರ ಮಹಿಳೆಯ ತೂಕ 49 ಕೆ.ಜಿ.ಗೆ ಇಳಿದಿದೆ.

ಶಸ್ತ್ರಚಿಕಿತ್ಸೆ ಮೂಲಕ ಶಾಂತಿ (ಹೆಸರು ಬದಲಾಯಿಸಲಾಗಿದೆ) ಅವರ ಹೊಟ್ಟೆಯಿಂದ ಗೆಡ್ಡೆಯನ್ನು ಹೊರತೆಗೆದಾಗ ಆಕೆಯ ದೇಹದಿಂದ ದೊಡ್ಡ ತೂಕವು ಎತ್ತಲ್ಪಟ್ಟಂತೆ ಭಾಸವಾಗಿದೆ. ಗುಜರಾತಿನ ದಾಹೋದ್ ಜಿಲ್ಲೆಯ ದಿಯೋಗರ್ ಬರಿಯಾದ 56 ವರ್ಷದ ಮಹಿಳೆ ಕಳೆದ 18 ವರ್ಷಗಳಿಂದ 47 ಕೆ.ಜಿ. ತೂಕದ ಗಡ್ಡೆಯನ್ನು ಹೊಂದಿದ್ದರು. ಇದು ಅವರ ಪ್ರಸ್ತುತ ದೇಹದ ತೂಕಕ್ಕಿಂತ ಕೇವಲ ಎರಡು ಕೆ.ಜಿ. ಮಾತ್ರ ಕಡಿಮೆ ಇತ್ತು.

ರೋಗಿ ನೇರವಾಗಿ ನಿಲ್ಲಲು ಸಾಧ್ಯವಾಗದ ಕಾರಣ ಶಸ್ತ್ರಚಿಕಿತ್ಸೆಗೆ ಮುನ್ನ ರೋಗಿಯ ತೂಕ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಶಸ್ತ್ರಚಿಕಿತ್ಸೆಯ ನಂತರ ಆಕೆಯ ತೂಕ 49 ಕೆ.ಜಿ. ಆಗಿದೆ. ವೈದ್ಯಕೀಯವಾಗಿ ರೆಟ್ರೊಪೆರಿಟೋನಿಯಲ್ ಲಿಯೊಮಿಯೊಮಾ ಎಂದು ಕರೆಯಲ್ಪಡುವ ಗೆಡ್ಡೆ ಸೇರಿದಂತೆ ತೆಗೆದುಹಾಕಲಾದ ಪ್ರದೇಶವು ಅದರ ನಿಜವಾದ ತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದೆ ಎಂದು ಅಪೊಲೊ ಆಸ್ಪತ್ರೆಗಳ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಚಿರಾಗ್ ದೇಸಾಯಿ ಹೇಳಿದ್ದಾರೆ.

ಮಹಿಳೆ ಕಳೆದ 18 ವರ್ಷಗಳಿಂದ ಗೆಡ್ಡೆಯನ್ನು ಹೊಂದಿದ್ದರು. ಆರಂಭದಲ್ಲಿ ಅದು ದೊಡ್ಡದಾಗಿರಲಿಲ್ಲ. ಇದರಿಂದ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಎಂದು ಭಾವಿಸಿ ಆಕೆ ಮೊದಲು ಕೆಲವು ಆಯುರ್ವೇದ ಮತ್ತು ಅಲೋಪತಿ ಔಷಧಿಗಳನ್ನು ತೆಗೆದುಕೊಂಡಿದ್ದಾರೆ. ನಂತರ 2004 ರಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದ್ದು, ಇದು ಹಾನಿಕರವಲ್ಲದ ಗೆಡ್ಡೆ ಎಂಬದು ತಿಳಿದುಬಂದಿತ್ತು.

ಅದೇ ವರ್ಷ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಶ್ವಾಸಕೋಶ, ಮೂತ್ರಪಿಂಡ, ಕರುಳು ಸೇರಿದಂತೆ ಎಲ್ಲಾ ಆಂತರಿಕ ಅಂಗಗಳಿಗೆ ಗೆಡ್ಡೆ ಸೇರಿಕೊಂಡಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಅಪಾಯಕಾರಿ ಎಂದು ಪರಿಗಣಿಸಿ ಹೊಲಿಗೆ ಹಾಕಿದ್ದರು. ಬಳಿಕ ಹಲವು ವೈದ್ಯರ ಸಲಹೆ ಪಡೆದರೂ ಆಪರೇಷನ್ ಮಾಡಲು ಯಾರೂ ಸಿದ್ಧರಿರಲಿಲ್ಲ. ಏತನ್ಮಧ್ಯೆ, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಎರಡು ವರ್ಷಗಳು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ಗೆಡ್ಡೆಯ ಗಾತ್ರವು ಸುಮಾರು ದ್ವಿಗುಣಗೊಂಡಿದ್ದು, ಮಹಿಳೆ ನಿರಂತರ ನೋವಿನಿಂದ ಬಳಲುತ್ತಿದ್ದರು ಎಂಬುದಾಗಿ ಆಕೆಯ ಪುತ್ರ ಮಾಹಿತಿ ನೀಡಿದ್ದಾರೆ.

ಅಂತಿಮವಾಗಿ, ಕುಟುಂಬವು ಅಪೋಲೋ ಆಸ್ಪತ್ರೆಯನ್ನು ಸಂಪರ್ಕಿಸಿದೆ. ಅಲ್ಲಿ ವೈದ್ಯರು ಸಂಪೂರ್ಣ ಮೌಲ್ಯಮಾಪನದ ನಂತರ ಜನವರಿ 27 ರಂದು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ವಾಸ್ತವವಾಗಿ ಈ ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿ ಎಂದು ಡಾ.ದೇಸಾಯಿ ಮಾಹಿತಿ ನೀಡಿದ್ದಾರೆ. ಹೊಟ್ಟೆಯ ಚರ್ಮದಲ್ಲಿ ಗೆಡ್ಡೆಯ ಬೆಳವಣಿಗೆಯಿಂದಾಗಿ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು ಮತ್ತು ಗರ್ಭಾಶಯದಂತಹ ಅಂಗಗಳ ಸ್ಥಾನವು ಬದಲಾಗಿದೆ. ರಕ್ತನಾಳಗಳ ಸಂಕುಚನದಿಂದಾಗಿ ರಕ್ತದೊತ್ತಡದಲ್ಲಿ ಹೆಚ್ಚಳ ಕಂಡುಬಂದಿದೆ. ಆದ್ದರಿಂದ, ಗೆಡ್ಡೆಯನ್ನು ತೆಗೆದುಹಾಕುವುದರಿಂದ ರಕ್ತದೊತ್ತಡದಲ್ಲಿ ಹಠಾತ್ ಕುಸಿತದ ಅಪಾಯವಿತ್ತು. ಆದರೆ, ವಿಶೇಷ ಔಷಧ ನೀಡಿ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಎಂಟು ತಜ್ಞ ವೈದ್ಯರ ತಂಡ ಸುಮಾರು ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯಿಂದ 47 ಕೆ.ಜಿ. ತೂಕದ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು