News Karnataka Kannada
Tuesday, April 16 2024
Cricket
ವಿದೇಶ

ದೂಧಸಾಗರ್ ಜಲಪಾತಕ್ಕೆ ಪ್ರವಾಸಿಗರು, ಚಾರಣಿಗರಿಗೆ ನಿಷೇಧ

entry-for-tourist-in-doodhsagar-prohibited
Photo Credit : News Kannada

ಪಣಜಿ: ಗೋವಾ-ಕರ್ನಾಟಕ ಗಡಿಯಲ್ಲಿರುವ ದಕ್ಷಿಣ ಗೋವಾದ ಮನೋಹರವಾದ ದೂಧಸಾಗರ್ ಜಲಪಾತಕ್ಕೆ ಪ್ರವಾಸಿಗರು, ಚಾರಣಿಗರು ಸಹಿತ ಎಲ್ಲರಿಗೂ ಪ್ರವೇಶ ನಿಷೇಧಿಸಿ ಗೋವಾ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಮಳೆಗಾಲದಲ್ಲಿ ತೀವ್ರವಾಗಿದ್ದು ಈ ಹಿನ್ನಲೆಯಲ್ಲಿ ದೂಧ್‌ಸಾಗರ್‌ ಜಲಪಾತ ಜೀವಕಳೆ ಪಡೆದುಕೊಂಡಿದೆ. ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಚಾರಣಿಗರು ದೂಧ್‌ಸಾಗರ್‌ ಜಲಪಾತಕ್ಕೆ ಭೇಟಿ ನೀಡುತ್ತಾರೆ.

ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎ.ಅಸ್ವಿನ್ ಚಂದ್ರು ಈ ರೀತಿ ಆದೇಶ ನೀಡಿದ್ದಾರೆ. ಪ್ರವಾಸಿಗರು, ಚಾರಣಿಗರು ಮತ್ತು ಇತರ ಎಲ್ಲ ವ್ಯಕ್ತಿಗಳನ್ನು ದೂ‌ಧ್‌ಸಾಗರ ಜಲಪಾತಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಟ್ರೆಕ್ಕಿಂಗ್‌ ಬರುವವರು, ರೈಲಿನ ಮೂಲಕ ಬರುವವರಿಗೂ ನಿಷೇಧ ಹೇರಲಾಗಿದೆ.

ದೂಧ್ ಸಾಗರ್ ಜಲಪಾತ, ದೂಧ್ ಸಾಗರ್ ರೈಲ್ವೆ ನಿಲ್ದಾಣ, ದೂಧ್ ಸಾಗರ್ ಜಲಪಾತದ ಬಳಿಯ ರೈಲ್ವೆ ಸೇತುವೆ ಮೇಲೆ ಪ್ರವಾಸಿಗರು, ಚಾರಣಿಗರು ಮತ್ತು ಇತರರಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸರು, ರೈಲ್ವೆ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಇಲ್ಲಿಗೆ ಹೋಗುವಂತಿಲ್ಲ. ಆದಾಗ್ಯೂ, ದೂಧ್ ಸಾಗರ್ ಜಲಪಾತದ ತಪ್ಪಲಿನಲ್ಲಿ ಗೊತ್ತುಪಡಿಸಿದ ಮಾರ್ಗವನ್ನು ಅನುಸರಿಸಲು ಅನುಮತಿ ನೀಡಲಾಗುತ್ತದೆ. ಪ್ರವಾಸಿಗರು ಅರಣ್ಯ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ಕುಳೆ, ಕ್ಯಾಸಲ್ ರಾಕ್, ಸೋನಾವಲಿ ಮತ್ತು ಕರಂಜೋಲ್‍ನಲ್ಲಿ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು. ಪೊಲೀಸ್, ರೈಲ್ವೆ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಇರುತ್ತಾರೆ. ಇಲ್ಲಿಂದ ಪ್ರವೇಶವನ್ನು ಮುಚ್ಚಲಾಗುತ್ತದೆ. ನೈಋತ್ಯ ರೈಲ್ವೆಯಿಂದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ನಿಗಾ ಕೂಡ ಇರುತ್ತದೆ.

ನೈಋತ್ಯ ರೈಲ್ವೆಯಿಂದ ಬ್ಯಾರಿಕೇಡಿಂಗ್ ಮಾಡಲಾಗುವುದು. ಜಲಪಾತದಲ್ಲಿ ಇಂಗ್ಲಿಷ್, ಮರಾಠಿ, ಕೊಂಕಣಿ, ಕನ್ನಡ ಮತ್ತು ಹಿಂದಿ ಭಾಷೆಯ ಪ್ರವೇಶ ನಿಷೇಧದ ಫಲಕಗಳನ್ನು ಸಹ ಅಳವಡಿಸಲಾಗುವುದು. ಮೇಲ್ಕಂಡ ನಿಯಮಗಳ ಉಲ್ಲಂಘನೆಗಾಗಿ ಅಥವಾ ನೌಕರರು ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಈ ಆದೇಶಪತ್ರವನ್ನು ಜಿಲ್ಲಾಧಿಕಾರಿಗಳು ನೈಋತ್ಯ ರೈಲ್ವೆ ಹುಬ್ಬಳ್ಳಿ ಕಚೇರಿ, ಹುಬ್ಬಳ್ಳಿ ರೈಲ್ವೆ ಪೊಲೀಸ್, ವನ್ಯಜೀವಿ ರೇಂಜರ್ ಫೊಂಡಾ, ಕುಲೆ ಪೊಲೀಸ್ ಠಾಣೆ, ಸಹಾಯಕ ಅರಣ್ಯ ರಕ್ಷಕ ಉತ್ತರ ಗೋವಾ, ಕಾರ್ಯದರ್ಶಿ ಮತ್ತು ಗೆಡಾ ಸದಸ್ಯರಿಗೆ ಪತ್ರಗಳನ್ನು ಕಳುಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು