News Karnataka Kannada
Monday, April 29 2024
ದೆಹಲಿ

ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು ಕೆಲಸಕ್ಕೆ ಬರುವಂತೆ ಬಾಸ್ ನಿಂದ ಆರ್ಡರ್

ಕ್ಯಾನ್ಸರ್‌ನಿಂದಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ ಮಹಿಳೆಯೊಬ್ಬರಿಗೆ ಖಾಸಗಿ ಕಂಪನಿಯವರು ಕೆಲಸಕ್ಕೆ ವಾಪಸ್ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ  ಅವರ ಮಗಳು ಅಳಲು ತೊಡಿಕೊಂಡಿದ್ದಾರೆ.
Photo Credit : NewsKarnataka

ನವದೆಹಲಿ:  ಕ್ಯಾನ್ಸರ್‌ನಿಂದಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ ಮಹಿಳೆಯೊಬ್ಬರಿಗೆ ಖಾಸಗಿ ಕಂಪನಿಯವರು ಕೆಲಸಕ್ಕೆ ವಾಪಸ್ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ  ಅವರ ಮಗಳು ಅಳಲು ತೊಡಿಕೊಂಡಿದ್ದಾರೆ.

ತನ್ನ ತಾಯಿ ಐರ್ಲೆಂಡ್‌ನ ಅಂಗಡಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾಳೆ.  ತನ್ನ 50 ವರ್ಷದ ತಾಯಿ ಕಳೆದ 18 ತಿಂಗಳುಗಳಿಂದ 4ನೇ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ. ತಾಯಿ ಕೆಲಸ ಮಾಡುವ ಕಂಪನಿಯ ಬಾಸ್ ಗೂ ಅಮ್ಮನ ಸ್ಥಿತಿ ಗೊತ್ತಿದೆ.. ಆದರೆ ಬಾಸ್ ತನ್ನ ತಾಯಿಯನ್ನು ಆಫೀಸಿಗೆ ಬರುವಂತೆ ಕೇಳುತ್ತಲೇ ಇರುತ್ತಾರೆ.

ಅನಾರೋಗ್ಯದ ತಾಯಿಯನ್ನು ಕೆಲಸಕ್ಕೆ ಮರಳುವಂತೆ ಹೇಗೆ ಕಂಪನಿಯವರು ಒತ್ತಡ ಹೇರಿದರು ಎಂಬುದನ್ನು ID @disneydoll96 ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.

ಪೋಸ್ಟ್‌ನಲ್ಲಿ ಬಾಸ್‌ ಕಳುಹಿಸಿದ ಇಮೇಲ್‌ನ ಸ್ಟ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ‘ನೀವು ಚಿಕಿತ್ಸೆ ನೀಡುತ್ತಿರುವ ಆಂಕೊಲಾಜಿಸ್ಟ್‌ನಿಂದ ನೀವು ಕೆಲಸಕ್ಕೆ ಮರಳಲು ಯೋಗ್ಯರಾಗಿರುವಿರಿ ಎಂದು ಪತ್ರವನ್ನು ಪಡೆಯಿರಿ. ಬಾಸ್ ಕೂಡ ಮೀಟಿಂಗ್ ಗೆ ಬರುವಂತೆ ಇಮೇಲ್ ಕಳುಹಿಸಿದ್ದರು.

ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ವಿವಿಧ ಕಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.

ಇಲ್ಲೊಬ್ಬ ಬಾಸ್ ತನ್ನ ಉದ್ಯೋಗಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೆ ಕಂಪನಿಗೆ ಬಂದು ಕೆಲಸ ಮಾಡಲು ಹೇಳಿದ್ದಾನೆ.

ತನ್ನ ಉದ್ಯೋಗಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ಕಂಪನಿಗೆ ಬಂದು ಕೆಲಸ ಮಾಡಲು ಬಾಸ್ ಹೇಳಿದ್ದಾನೆ ಎಂದರೆ ಅದು ಮಾನವೀಯತೆ ಮನುಷ್ಯನಲ್ಲಿ ಮಡೆಯಾಗುತ್ತಿದೆ ಎಂದರ್ಥ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು