Categories: ದೆಹಲಿ

ನವದೆಹಲಿ: ವೆಬ್ ಚಟ್ನಿ ಸಹ ಸಂಸ್ಥಾಪಕ ಸಿದ್ಧಾರ್ಥ್ ರಾವ್ ನಿಧನ

ನವದೆಹಲಿ: ಭಾರತದ ಮೊದಲ ಮತ್ತು  ಡಿಜಿಟಲ್ ಏಜೆನ್ಸಿಗಳಲ್ಲಿ ಒಂದಾದ ವೆಬ್ ಚಟ್ನಿಯ ಸಹ ಸಂಸ್ಥಾಪಕ ಸಿದ್ಧಾರ್ಥ್ ರಾವ್ ತಮ್ಮ 43 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅವರು ಶುಕ್ರವಾರ ಸಂಜೆ ನಿಧನರಾದರು. ಮೃತರು ಪತ್ನಿ ಹಾಗೂ ಪೋಷಕರನ್ನು ಅಗಲಿದ್ದಾರೆ.

ತಮ್ಮ 19 ನೇ ವಯಸ್ಸಿನಲ್ಲಿ, ಅವರು ವೆಬ್ ಚಟ್ನಿಯನ್ನು ಪ್ರಾರಂಭಿಸಿದರು, ಇದು 2019 ರಲ್ಲಿ ಕ್ಯಾನೆಸ್ ಲಯನ್ಸ್ ಇಂಟರ್ನ್ಯಾಷನಲ್ ಫೆಸ್ಟಿವಲ್ ಆಫ್ ಕ್ರಿಯೇಟಿವಿಟಿಯಲ್ಲಿ ಪ್ರಶಸ್ತಿ ಪಡೆದಿತ್ತು.

2008 ರಲ್ಲಿ, ಅವರು ವೆಬ್ ಚಟ್ನಿ ಅಡಿಯಲ್ಲಿ ನೆಟ್ವರ್ಕ್ ಪ್ಲೇ ಅನ್ನು ಇನ್ಕ್ಯುಬೇಷನ್  ಸ್ಥಾಪಿಸಿದರು.  ಇದು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅತಿದೊಡ್ಡ ಬ್ರಾಂಡ್ ಜಾಹೀರಾತು-ನೆಟ್ವರ್ಕ್ ಆಗಿ ಮಾರ್ಪಟ್ಟಿತು.  ನಂತರ ಈ ಕಂಪೆನಿ ಬರ್ಟೆಲ್ಸ್ಮನ್ ಎಜಿ ಸ್ವಾಧೀನಪಡಿಸಿಕೊಂಡಿತು. 2013 ರಲ್ಲಿ, ವೆಬ್ ಚಟ್ನಿಯನ್ನು ಜಪಾನಿನ ಬಹುರಾಷ್ಟ್ರೀಯ ಮಾಧ್ಯಮ ನೆಟ್ವರ್ಕ್ ಡೆಂಟ್ಸು ಏಜಿಸ್ ನೆಟ್ವರ್ಕ್ ಸ್ವಾಧೀನಪಡಿಸಿಕೊಂಡಿತು.  2021 ರಲ್ಲಿ ಅವರನ್ನು ಭಾರತ ಘಟಕದ ಮುಖ್ಯಸ್ಥರಾಗಿ ನೇಮಿಸಲಾಯಿತು.

Ashika S

Recent Posts

ಶ್ರೀನಿವಾಸ್ ಪ್ರಸಾದ್ ಗೆ ನುಡಿ ನಮನ ಸಲ್ಲಿಸಿ ಕಣ್ಣೀರಿಟ್ಟ ಬದನವಾಳು ಗ್ರಾಮಸ್ಥರು

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಸಾದ್ ನೆನೆದು…

11 mins ago

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

22 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

27 mins ago

ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ 'ಸಾಂಸ್ಕೃತಿಕ ನಾಯಕ', ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ…

33 mins ago

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

43 mins ago

ಕರ್ನಾಟಕದ ಎಲ್ಲಾ ಭಾಷೆಗಳಲ್ಲಿಯೇ ವೈಶಿಷ್ಟ್ಯ ಪಡೆದ ಲಂಬಾಣಿ ಭಾಷೆ

ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ…

54 mins ago