ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಕೆಗೆ ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಇನ್ನು ಮುಂದೆ ಭಾರತೀಯ ಪ್ರವಾಸಿಗರು ಫ್ರಾನ್ಸ್ ಗೆ ಭೇಟಿ ನೀಡುವ ವೇಳೆ ರೂಪಾಯಿಗಳಲ್ಲಿಯೇ ಪಾವತಿ ನಡೆಸಬಹುದು ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.
ಫ್ರಾನ್ಸ್ಗೆ ಭೇಟಿ ನೀಡಿದ ಮೊದಲ ದಿನ ಪ್ಯಾರಿಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಫ್ರಾನ್ಸ್ನಲ್ಲಿ ಭಾರತದ ಯುಪಿಐ ಬಳಕೆ ಒಪ್ಪಂದ ಅಂತಿಮಗೊಳಿಸಲಾಗಿದೆ ಎಂದು ಘೋಷಿಸಿದರು.
ಭಾರತೀಯ ಪ್ರವಾಸಿಗರು ಐಫೆಲ್ ಟವರ್ಗೆ ಭೇಟಿ ನೀಡುವ ವೇಳೆ ಮೊಬೈಲ್ ಅಪ್ಲಿಕೇಶನ್ನ ಸಹಾಯದಿಂದ ರೂಪಾಯಿಯಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದರು. ಈ ವೇಳೆ ಅನಿವಾಸಿ ಭಾರತೀಯರಿಂದ ಭಾರಿ ಕರತಾಡನ ಮೊಳಗಿತು.
2022 ರಲ್ಲಿ, ಯುಪಿಐ ಸೇವೆಗಳನ್ನು ಒದಗಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ), ಫ್ರಾನ್ಸ್ನ ಆನ್ಲೈನ್ ಪಾವತಿ ವ್ಯವಸ್ಥೆ ಲೈರಾದೊಂದಿಗೆ ಸಹಿಹಾಕಿತ್ತು.