News Karnataka Kannada
Monday, April 22 2024
Cricket
ದೆಹಲಿ

ಪ್ರಧಾನಿ ಮೋದಿ ಅವರ 30 ವರ್ಷದ ಹಿಂದಿನ ಅಪರೂಪದ ಫೋಟೋ ಹಂಚಿಕೊಂಡ ಕೇಂದ್ರ ಸಚಿವ

Union Minister shares a rare photo of PM Modi from 30 years ago
Photo Credit : News Kannada

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಭಾವಿ ನಾಯಕರೊಲ್ಲಬ್ಬರಾಗಿ ಬೆಳೆದಿದ್ದಾರೆ. ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳು ಅವರನ್ನು ನಿರಂಕುಶವಾದಿ, ಹಿಟ್ಲರ್‌ ಮಾದರಿ ಆಡಳಿತಗಾರ ಎಂದು ಎಷ್ಟೇ ಹೀಗಳೆದರೂ ಮೋದಿ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಅವರು ಪ್ರಭಾವಶಾಲಿ ವಿಶ್ವನಾಯಕರಾಗಿ ಹೊರಹೊಮ್ಮಿರುವುದು ಸತ್ಯ. ಈ ನಿಟ್ಟಿನಲ್ಲಿ 30 ವರ್ಷಗಳ ಹಿಂದೆ ಪ್ರಧಾನಿ ಹೇಗಿದ್ದರೂ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಪ್ರಸ್ತುತ ಪ್ರಧಾನಿ ಮೋದಿ ಅವರು ಫ್ರಾನ್ಸ್‌ ಪ್ರವಾಸದಲ್ಲಿ ಇರುವ ವೇಳೆಯೆ ಹಾಲಿ ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು 30 ವರ್ಷಗಳ ಹಿಂದಿನ ಅಮರಿಕ ಪ್ರವಾಸದ ವೇಳೆ ತೆಗೆದ ಪೋಟಗಳನ್ನು ಸಚಿವರು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

1994 ರಲ್ಲಿ ಅಮೆರಿಕನ್ ಕೌನ್ಸಿಲ್ ಆಫ್ ಯಂಗ್ ಪೊಲಿಟಿಕಲ್ ಲೀಡರ್ಸ್ ಎಂಬ ಲಾಭ ರಹಿತ ಸಂಸ್ಥೆಯೊಂದು ವಿಶ್ವದ ನಾನಾ ರಾಷ್ಟ್ರಗಳ ಯುವ ನಾಯಕರ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆ ಸುಮಾರು 30 ವರ್ಷಗಳ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1994 ರಲ್ಲಿ ಅಮೆರಿಕದ ಯುವ ರಾಜಕೀಯ ನಾಯಕರ ಪರಿಷತ್ತಿನ ಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ, ಮಾಜಿ ಕೇಂದ್ರ ಸಚಿವ ದಿವಂಗತ ಹೆಚ್​ ಎನ್​​ ಅನಂತ್ ಕುಮಾರ್ ಮತ್ತು ಇತರರೊಂದಿಗೆ ಭಾಗವಹಿಸಲು ಅಮೆರಿಕಕ್ಕೆ ಭೇಟಿ ನೀಡಿದ್ದ ದಿನಗಳ ನೆನಪು. 30 ವರ್ಷಗಳ ಹಿಂದೆ ಈ ಫೋಟೋದಲ್ಲಿ ಪ್ರಧಾನಿ ಮೋದಿ ಜೊತೆಗೆ ಇಬ್ಬರು ತೆಲುಗು ನಾಯಕರೂ ಸಹ ಇದ್ದರು.
ಈ ಚಿತ್ರ 1994 ರಲ್ಲಿ ಅಮೇರಿಕಾದಲ್ಲಿ ನರೇಂದ್ರ ಮೋದಿ ತಂಡದಲ್ಲಿ ಹಾಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗ ಬಿಜೆಪಿ ತಮಿಳುನಾಡು ಉಸ್ತುವಾರಿ ನಾಯಕ ಪೊಂಗುಲೇಟಿ ಸುಧಾಕರ್ ರೆಡ್ಡಿ ಇದ್ದಾರೆ.

1994ರಲ್ಲಿ ಅಮೆರಿಕದಲ್ಲಿ ನಡೆದ ರಾಜಕೀಯ ಮುಖಂಡರ ಸಮಾವೇಶಕ್ಕೆ ದೇಶದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತೆರಳಿದ್ದರು. ಬಿಜೆಪಿ ತಂಡದಲ್ಲಿ ನರೇಂದ್ರ ಮೋದಿ, ಕಿಶನ್ ರೆಡ್ಡಿ, ಅನಂತ್ ಕುಮಾರ್ ಇದ್ದರು. ಕಾಂಗ್ರೆಸ್ ನಿಂದ ಪೊಂಗುಲೇಟಿ ಸುಧಾಕರ್ ರೆಡ್ಡಿಗೆ ಅವಕಾಶ ಸಿಕ್ಕಿತ್ತು. ಅಂದಿನಿಂದ ನರೇಂದ್ರ ಮೋದಿಯವರೊಂದಿಗೆ ಕಿಶನ್ ರೆಡ್ಡಿ ಮತ್ತು ಸುಧಾಕರ್ ರೆಡ್ಡಿ ಸ್ನೇಹ ಆರಂಭಿಸಿದಂತಿದೆ. ಈ ಮಧ್ಯೆ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ, ಈಗ ದೇಶದ ಪ್ರಧಾನಿಯಾಗಿದ್ದಾರೆ. ಕಿಶನ್ ರೆಡ್ಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಪ್ರಸ್ತುತಪಡಿಸಿ, ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು