Categories: ದೆಹಲಿ

ಯೂನಿಲಿವರ್ ಸಂಸ್ಥೆಯ ಕೆಲಸಗಾರರಿಗೆ ಶಾಕ್: ವಜಾ ಸಾಧ್ಯತೆ

ನವದೆಹಲಿ: ಹಿಂದೂಸ್ತಾನ್ ಯೂನಿಲಿವರ್​ನ ಮಾತೃಸಂಸ್ಥೆಯಾದ ಯುನಿಲಿವರ್ ತನ್ನ ಬಿಸಿನೆಸ್ ಮರು ರಚಿಸುತ್ತಿದ್ದು, ತನ್ನ ಐಸ್ ಕ್ರೀಮ್ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯಾಗಿ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.

ಈ ಹೂಸ ಯೋಜನೆಯಿಂದ 7,500 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಐಸ್​ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದ್ದು, 2025ರ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದು. ಯೂನಿಲಿವರ್​ನಲ್ಲಿ ಬೆನ್ ಅಂಡ್ ಜೆರ್ರೀಸ್, ಮ್ಯಾಗ್ನಸ್ ಮೊದಲಾದ ಬ್ರ್ಯಾಂಡ್​ನ ಐಸ್​ಕ್ರೀಮ್ ಬಿಸಿನೆಸ್​ಗಳಿವೆ. ಅವೆಲ್ಲವೂ ಸೇರಿ ಪ್ರತ್ಯೇಕ ಸಂಸ್ಥೆಯಾಗಿ ಹೊರಬರಬಹುದು ಎಂದು ವರದಿಯೊಂದು ಹೇಳಿದೆ.

ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವುದರಿಂದ ಯೂನಿಲಿವರ್​ಗೆ ಹೆಚ್ಚು ಅನುಕೂಲವಾಗಬಹುದು. ಸಂಸ್ಥೆಯ ಗಮನ ನಿರ್ದಿಷ್ಟಗೊಳಿಸಲು ಮತ್ತು ವ್ಯವಹಾರ ಸರಳಗೊಳಿಸಲು ಸಹಾಯವಾಗಲಿದೆ. ಹಾಗೆಯೇ, ವಿಶ್ವದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಬಿಸಿನೆಸ್ ಸೃಷ್ಟಿ ಕೂಡ ಸಾಧ್ಯವಾಗುತ್ತದೆ. ಇದರಿಂದ ಐಸ್ ಕ್ರೀಮ್ ಬಿಸಿನೆಸ್ ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಯೂನಿಲಿವರ್​ನ ಮುಖ್ಯಸ್ಥರಾದ ಇಯಾನ್ ಮೀಕಿನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಯುನಿಲಿವರ್ 190 ದೆಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅದು ವಿಶವದ ಅತಿದೊಡ್ಡ ಸೋಪು ತಯಾರಿಕ ಕಂಪನಿ. ನೀರು, ಆಹಾರ, ಸೌಂದರ್ಯ ವರ್ಧಕ, ಐಸ್​ಕ್ರೀಮ್, ಔಷಧ, ಡ್ರಿಂಕ್ಸ್, ಚಹಾ ಇತ್ಯಾದಿ ಬಹಳಷ್ಟು ಉತ್ಪನ್ನಗಳನ್ನು ಅದು ತಯಾರಿಸುತ್ತದೆ.

Gayathri SG

Recent Posts

ಹೆಲಿಕಾಪ್ಟರ್ ಪತನ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

1 min ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

18 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

36 mins ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

1 hour ago

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

1 hour ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

2 hours ago