ನವದೆಹಲಿ: ಸಂಸತ್ತಿನಲ್ಲಿ ಅಶಿಸ್ತು ತೋರಿದವರನ್ನು ಅಮಾನತು ಪರ್ವ ಮತ್ತೆ ಮುಂದುವರಿದಿದೆ. ಇಂದು ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ. ಕೇರಳದ ಥಾಮಸ್ ಚಾಜಿಕಾಡನ್ ಮತ್ತು ಎಎಮ್ ಆರಿಫ್ ಅಮಾನತಾದ ಸಂಸದರು. ಚಾಜಿಕಡನ್ ಕೇರಳ ಕಾಂಗ್ರೆಸ್ (ಎಂ) ಮತ್ತು ಆರಿಫ್ ಸಿಪಿಎಂ ಪಕ್ಷದವರಾಗಿದ್ದಾರೆ. ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ್ದಕ್ಕಾಗಿ ಈ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
ಚಳಿಗಾಲದ ಅಧಿವೇಶ ಶುಕ್ರವಾರ (ಡಿಸೆಂಬರ್ 22)ದಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಒಟ್ಟು 143 ಮಂದಿ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 4 ರಂದು ಆರಂಭವಾದ ಅಧಿವೇಶನದಲ್ಲಿ ಡಿಸೆಂಬರ್ 14 ರಂದು 14 ಸಂಸದರು, ಸೋಮವಾರ 78, ಮಂಗಳವಾರ 49 ಮತ್ತು ಇಂದು ಇನ್ನೂ ಇಬ್ಬರನ್ನು ಅಮಾನತುಗೊಳಿಸಲಾಗಿದೆ.