Categories: ದೆಹಲಿ

ಹೊಸ ಸಂಸತ್‌ ವಿವಿಧತೆಯಲ್ಲಿ ಏಕತೆಯ ಪ್ರತೀಕ: ಕಟ್ಟಡದ ರಚನೆ ವಿಶೇಷತೆ ಹೀಗಿದೆ

ನವದೆಹಲಿ: ಸಂಸತ್‌ ಕಟ್ಟಡವು ಭಾರತದ ಪ್ರಗತಿಯ ಪ್ರತೀಕವಾಗಿದ್ದು, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಐಕಾನಿಕ್ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಲಿ. ಕನಸುಗಳನ್ನು ಪೋಷಿಸಿ ನೀರೆರದು ಅದನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಉಲ್ಲೇಖಿಸಿದ್ದರು. ಅದೇರೀತಿ ಸಂಸತ್‌ ಕಟ್ಟಡಕ್ಕೆ ದೇಶದ ವಿವಿಧ ಭಾಗಗಳಿಂದ ಮೂಲ ವಸ್ತುಗಳನ್ನು ಪಡೆದಿರುವುದು ವಿಶಿಷ್ಟವಾಗಿದೆ.

ಉದಯಪುರದ ಕೆಂಪು ಗ್ರಾನೈಟ್, ದಿಯು, ದಮನ್‌ನಿಂದ ಉಕ್ಕು: ಉತ್ತರ ಪ್ರದೇಶದ ಮಿರ್ಜಾಪುರದಿಂದ ಕಾರ್ಪೆಟ್‌ಗಳು, ತ್ರಿಪುರಾದಿಂದ ಬಿದಿರು ನೆಲಹಾಸು ಮತ್ತು ರಾಜಸ್ಥಾನದಿಂದ ಕಲ್ಲಿನ ಕೆತ್ತನೆಗಳನ್ನು ಪಡೆಯಲಾಗಿದೆ. ಕಟ್ಟಡದಲ್ಲಿ ಬಳಸಲಾದ ತೇಗದ ಮರವನ್ನು ಮಹಾರಾಷ್ಟ್ರದ ನಾಗ್ಪುರದಿಂದ ಪಡೆಯಲಾಗಿದ್ದು, ಕೆಂಪು ಮತ್ತು ಬಿಳಿ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ಸಂಗ್ರಹಿಸಲಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿರುವ ಕೆಂಪು ಕೋಟೆ ಮತ್ತು ಹುಮಾಯೂನ್ ಸಮಾಧಿಯ ಮರಳುಗಲ್ಲುಗಳು ಕೂಡಾ ಸರ್ಮಥುರಾ ಮೂಲದ್ದಾಗಿದೆ. ಕೇಶರಿಯಾ ಹಸಿರು ಕಲ್ಲನ್ನು ಉದಯಪುರದಿಂದ, ಕೆಂಪು ಗ್ರಾನೈಟ್ ಅನ್ನು ಅಜ್ಮೀರ್ ಬಳಿಯ ಲಾಖಾದಿಂದ ಮತ್ತು ಬಿಳಿ ಅಮೃತಶಿಲೆಯನ್ನು ರಾಜಸ್ಥಾನದ ಅಂಬಾಜಿಯಿಂದ ಪಡೆಯಲಾಗಿದೆ.

ಲೋಕಸಭೆ ಮತ್ತು ರಾಜ್ಯಸಭಾ ಕೊಠಡಿಗಳಲ್ಲಿನ ಫಾಲ್ಸ್ ಸೀಲಿಂಗ್‌ಗಳಿಗೆ ಉಕ್ಕಿನ ರಚನೆಯನ್ನು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯುನಿಂದ ಪಡೆಯಲಾಗಿದ್ದು, ಹೊಸ ಕಟ್ಟಡದಲ್ಲಿನ ಪೀಠೋಪಕರಣಗಳನ್ನು ಮುಂಬೈನಲ್ಲಿ ರಚಿಸಲಾಗಿದೆ. ಕಟ್ಟಡವನ್ನು ಆವರಿಸಿರುವ ಕಲ್ಲಿನ ‘ಜಾಲಿ’ (ಲ್ಯಾಟಿಸ್) ಕೆಲಸಗಳನ್ನು ರಾಜಸ್ಥಾನದ ರಾಜನಗರ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ಪಡೆಯಲಾಗಿದೆ.

980 ಕೋಟಿ ರೂ. ವೆಚ್ಚ: ನೂತನ ಸಂಸತ್ ಭವನವನ್ನು 950 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 64500 ಚದರ ಅಡಿ ವಿಸ್ತೀರ್ಣದಲ್ಲಿ ಇದರ ನಿರ್ಮಾಣವಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 950 ಕೊಠಡಿಗಳನ್ನು ನಿರ್ಮಿಸಲಾಗಿದೆ.

Gayathri SG

Recent Posts

ರಾಯಚೂರಿನಲ್ಲಿ ಬಿಸಿ ಹೆಚ್ಚಲು ಕೈ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ-ರಾಜಾ ಅಮರೇಶ್ವರ್ ನಾಯಕ್

ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ ಅಂತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಆರೋಪ…

7 mins ago

ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಕಣಕ್ಕೆ

ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್  ಹೈಕಮಾಂಡ್ ಕಣಕ್ಕಿಳಿಸಿದೆ.

14 mins ago

ಬಸ್ಸೊಂದು ನದಿ ಕಣಿವೆಗೆ ಉರುಳಿ 20 ಪ್ರಯಾಣಿಕರು ಮೃತ್ಯು

ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ…

32 mins ago

ಅಂಚೆಮತಪತ್ರ ವಿತರಣೆ: ಮೇ.1 ರಂದು1262 ಜನ ಸಿಬ್ಬಂದಿಯಿಂದ ಮತದಾನ

ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ…

1 hour ago

ಪುತ್ರನ ಕರ್ಮಕಾಂಡ; ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್‌ !

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಈ ಸಂಬಂಧ ಸಂತ್ರಸ್ತೆಯರ ಆರೋಪದ ಮೇಲೆ…

1 hour ago

ಲೈಂಗಿಕ ದೌರ್ಜನ್ಯ ಕೇಸ್: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರೇವಣ್ಣ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು…

1 hour ago