News Karnataka Kannada
Monday, April 29 2024
ದೆಹಲಿ

ಕಾಂಗ್ರೆಸ್‌ ಗೆ 80 ಕೋಟಿ ರೂ., ಬಿಜೆಪಿಗೆ 720 ಕೋಟಿ ರೂ. ದೇಣಿಗೆ

The Congress got Rs 80 crore, while the BJP got Rs 720 crore. Donations
Photo Credit : News Kannada

ನವದೆಹಲಿ: 2023 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. ಸಂಸ್ಥೆಗಳು, ಪಕ್ಷದ ನಾಯಕರು, ವ್ಯಕ್ತಿಗಳು, ಚುನಾವಣಾ ಟ್ರಸ್ಟ್‌ಗಳಿಂದ ಕಾಂಗ್ರೆಸ್ ಗೆ 80 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಈ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗ ಡಿ.04 ರಂದು ಸಾರ್ವಜನಿಕ ಡೊಮೈನ್ ನಲ್ಲಿ ಪ್ರಕಟಿಸಿದೆ.

ಕಾಂಗ್ರೆಸ್ ಗೆ ಕೋಲ್ಕತ್ತಾ ಮೂಲದ ಸಮಾಜ ಚುನಾವಣಾ ಟ್ರಸ್ಟ್ ಒಂದೇ 50 ಲಕ್ಷ ರೂಪಾಯಿ ನೀಡಿದೆ. ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ 2022-23ರ ಆರ್ಥಿಕ ವರ್ಷದಲ್ಲಿ ಸಂಸ್ಥೆಗಳು, ಚುನಾವಣಾ ಟ್ರಸ್ಟ್‌ಗಳು, ವ್ಯಕ್ತಿಗಳು ಮತ್ತು ಅದರ ಶಾಸಕರಿಂದ ಸುಮಾರು 720 ಕೋಟಿ ರೂಪಾಯಿಗಳನ್ನು ಕೊಡುಗೆಯಾಗಿ ಸ್ವೀಕರಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಾಗಿದ್ದು ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು