News Karnataka Kannada
Monday, April 29 2024
ದೆಹಲಿ

ಟೆಲಿಕಾಂ ಕಂಪನಿಗಳಿಗೆ ಬಿಗ್ ಶಾಕ್ ನೀಡಿದ ಟ್ರಾಯ್

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ದೊಡ್ಡ ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದೆ. ದೇಶಾದ್ಯಂತ ಫೋನ್ ಬಳಕೆದಾರರು ನಕಲಿ ಕರೆಗಳಿಂದ ಬೇಸತ್ತಿದ್ದಾರೆ.
Photo Credit : News Kannada

ದೆಹಲಿ: ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ದೊಡ್ಡ ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದೆ.

ದೇಶಾದ್ಯಂತ ಫೋನ್ ಬಳಕೆದಾರರು ನಕಲಿ ಕರೆಗಳಿಂದ ಬೇಸತ್ತಿದ್ದಾರೆ. ಇಂತಹ ಕರೆಗಳನ್ನು ನಿಲ್ಲಿಸುವಂತೆ ಟ್ರಾಯ್ ಹಲವಾರು ಬಾರಿ ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರೂ ಪ್ರಸಿದ್ಧ ಕಂಪನಿಗಳು ಈ ಸೂಚನೆಯನ್ನು ಪಾಲಿಸಲು ವಿಫಲವಾಗಿವೆ. ಇದೀಗ ಈ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಇದುವರೆಗೆ 110 ಕೋಟಿ ರೂ. ದಂಡ ವಿಧಿಸಿದೆ.

ಫೇಕ್ ಕಾಲ್​ಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಟ್ರಾಯ್ ಪದೇ ಪದೇ ಟೆಲಿಕಾಂ ಕಂಪನಿಗಳಿಗೆ ಕೇಳಿಕೊಂಡಿದೆ. ಕೆಲವು ಮಾರ್ಕೆಟಿಂಗ್ ಸಂಸ್ಥೆಗಳು ಟೆಲಿಮಾರ್ಕೆಟಿಂಗ್ ಸಂಖ್ಯೆಗಳ ಬದಲಿಗೆ ಸಾಮಾನ್ಯ ಫೋನ್ ಸಂಖ್ಯೆಗಳ ಮೂಲಕ ಸಂಪರ್ಕಿಸುತ್ತವೆ. ಇದು ಪರಿಚಯಸ್ಥರ ಕರೆ ಎಂದು ಜನರು ಭಾವಿಸುತ್ತಾರೆ, ಆದರೆ ಇವು ನಕಲಿ ಟೆಲಿಮಾರ್ಕೆಟಿಂಗ್ ಸಂಖ್ಯೆಗಳು. ಪ್ರಸ್ತುತ, ಟೆಲಿಕಾಂ ಆಪರೇಟರ್‌ಗಳು ಅಂತಹ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಫಲರಾಗಿದ್ದಾರೆ. ಇನ್ನು ಹೀಗಿದ್ದರೂ ಅಪರಿಚಿತ ಸಂಖ್ಯೆಗಳಿಂದ ಬರುವ ನಕಲಿ ಕರೆಗಳು ಭಾರತದಲ್ಲಿ ನಿಂತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು