Categories: ದೆಹಲಿ

30 ಕೋಟಿ ರೂ ಮಾರ್ಕೆಟ್ ಕ್ಯಾಪ್ ದಾಟಿದ ಮೊದಲ ಭಾರತೀಯ ಕಂಪನಿ ಟಾಟಾ ಗ್ರೂಪ್

ನವದೆಹಲಿ: ಇದೀಗ ಟಾಟಾ ಗ್ರೂಪ್ 30 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪ್ ಅಥವಾ ಷೇರುಸಂಪತ್ತು ಹೊಂದಿದ ಭಾರತದ ಮೊದಲ ಕಂಪನಿ ಎಂಬ ದಾಖಲೆ ತನ್ನ ಮುಡಿಗೇರಿಸಿಕೊಂಡಿದೆ.

ಟಾಟಾ ಗ್ರೂಪ್​ಗೆ ಸೇರಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಟಾಟಾ ಪವರ್, ಟಾಟಾ ಮೋಟಾರ್ಸ್ ಮೊದಲಾದ ಕಂಪನಿಗಳ ಷೇರುಬೆಲೆ ಈ ವರ್ಷ ಗಣನೀಯವಾಗಿ ಹೆಚ್ಚಾಗಿದ್ದು ಇದರಿಂದ ಟಾಟಾ ಗ್ರೂಪ್​ನ ಈ ಎಲ್ಲಾ ಕಂಪನಿಗಳ ಒಟ್ಟಾರೆ ಮಾರ್ಕೆಟ್ ಕ್ಯಾಪ್ 30 ಲಕ್ಷ ಕೋಟಿ ರೂ ಗಡಿ ದಾಟಿದೆ ಎನ್ನಲಾಗುತ್ತಿದೆ.

40ಕ್ಕೂ ಹೆಚ್ಚು ಕಂಪನಿಗಳು ಟಾಟಾ ಗ್ರೂಪ್​ಗೆ ಸೇರಿದೆ. ಇದರಲ್ಲಿ 24 ಕಂಪನಿಗಳು ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಿವೆ. ಇಷ್ಟೂ ಕಂಪನಿಗಳ ಷೇರುಮೊತ್ತ 30 ಲಕ್ಷ ಕೋಟಿ ರೂ ಗಡಿ ದಾಟಿರುವುದು ವಿಶೇಷ. ಟಾಟಾ ಕೆಮಿಕಲ್ಸ್, ತೇಜಸ್ ನೆಟ್ವರ್ಕ್, ಟಾಟಾ ಎಲ್​ಕ್ಸಿ ಷೇರು ಬಿಟ್ಟರೆ ಉಳಿದ ಷೇರುಗಳು ಈ ವರ್ಷ ಸಕಾರಾತ್ಮಕವಾಗಿ ಬೇಡಿಕೆ ಪಡೆದಿವೆ. ಅದರಲ್ಲೂ ಟಾಟಾ ಮೋಟಾರ್ಸ್, ಟಾಟಾ ಪವರ್ ಮತ್ತು ಇಂಡಿಯನ್ ಹೋಟೆಲ್ಸ್ ಕಂಪನಿ ಷೇರುಗಳು ಶೇ. 16ರಿಂದ 20ರವರೆಗೆ ಬೆಳೆದಿದೆ. ಟಿಸಿಎಸ್ ಅಥವಾ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯದ್ದೊಂದೇ ಷೇರುಸಂಪತ್ತು 180.22 ಬಿಲಿಯನ್ ಡಾಲರ್ ಇದೆ. ಅಂದರೆ 15 ಲಕ್ಷ ಕೋಟಿ ರೂ ಆಗುತ್ತದೆ. ವೈಯಕ್ತಿಕ ಕಂಪನಿಯ ಷೇರುಮೊತ್ತ ಪರಿಗಣಿಸಿದರೆ ವಿಶ್ವದಲ್ಲಿ ಟಿಸಿಎಸ್​ಗೆ 65ನೇ ಸ್ಥಾನ ಸಿಗುತ್ತದೆ. ಎಲ್ಲ ಟಾಟಾ ಕಂಪನಿಗಳದ್ದನ್ನು ಸೇರಿಸಿದರೆ 360 ಬಿಲಿಯನ್ ಡಾಲರ್​ಗೂ ಹೆಚ್ಚಾಗುತ್ತದೆ.

2024ರಲ್ಲಿ ಈವರೆಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ ಬೆಲೆಗಳಲ್ಲಿ ಶೇ.9ರಷ್ಟು ಏರಿಕೆ ಕಂಡಿದ್ದರೆ, ಇನ್ನು ಟಾಟಾ ಮೋಟಾರ್ಸ್‌ನ ಷೇರುಗಳಲ್ಲಿ ಶೇ. 20ರಷ್ಟು ಏರಿಕೆಯಾಗಿದೆ. ಇನ್ನು ಟಾಟಾ ಪವರ್‌ನ ಷೇರುಗಳ ಬೆಲೆಯಲ್ಲಿ ಶೇ. 18ರಷ್ಟು, ಇಂಡಿಯನ್‌ ಹೋಟೆಲ್ಸ್‌ ಷೇರುಗಳಲ್ಲಿ ಶೇ. 16ರಷ್ಟು ಏರಿಕೆ ಕಂಡಿದೆ. ಟಾಟಾ ಗ್ರೂಪ್‌ನ ಒಟ್ಟು 24 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಿವೆ. ಈ ನಡುವೆ, ತೇಜಸ್ ನೆಟ್‌ವರ್ಕ್, ಟಾಟಾ ಎಲಿಕ್ಸಿ ಮತ್ತು ಟಾಟಾ ಕೆಮಿಕಲ್ಸ್ ಈ ವರ್ಷ ಇಲ್ಲಿಯವರೆಗೆ ಶೇಕಡಾ 10 ಕ್ಕಿಂತ ಹೆಚ್ಚು ಕುಸಿದಿದ್ದರೆ ಉಳಿದ ಷೇರುಗಳು ಶೇಕಡಾ 1-5 ರ ವ್ಯಾಪ್ತಿಯಲ್ಲಿ ಗಳಿಸಿವೆ.

ಟಿಸಿಎಸ್‌ ಫೆಬ್ರವರಿ 6 ರಂದು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಶೇ. 4ರಷ್ಟು ಏರಿಕೆ ಕಂಡು, 15 ಲಕ್ಷ ಕೋಟಿಯ ಮಾರುಕಟ್ಟೆ ಮೌಲ್ಯ ಕಂಡಿದೆ. 2024ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿ ಪ್ರಮುಖ ಒಪ್ಪಂದಗಳನ್ನು ಪಡೆದಿರುವುದು ಷೇರು ಬೆಲೆ ಏರಿಕೆಗೆ ಕಾರಣವಾಗಿದೆ. ಈವರೆಗೂ ಟಿಸಿಎಸ್‌ 8.1 ಬಿಲಿಯನ್‌ ಯುಎಸ್‌ ಡಾಲರ್‌ ಒಪ್ಪಂದವನ್ನು ಪಡೆದುಕೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 3.8ರಷ್ಟು ಏರಿಕೆಯಾಗಿದೆ. ಇನ್ನು ಕಂಪನಿಯ ಮ್ಯಾನೇಜ್‌ಮೆಂಟ್‌ ಕೂಡ ದೀರ್ಘಾವಧಿಯಲ್ಲಿ ಕಂಪನಿ ಬೆಳವಣಿಗೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದು, ಸವಾಲಿನ ಸಣ್ಣ ಪುಟ್ಟ ಪರಿಸ್ಥಿತಿಗಳು ಕಡಿಮೆ ಆಗುತ್ತಿದ್ದಂತೆ ಕ್ಲೈಂಟ್‌ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

ಇಂಗ್ಲೆಂಡ್‌ ಮೂಲದ ವಿಮೆ ದೈತ್ಯ ಅವಿಯಾ ಜೊತೆ 15 ವರ್ಷಗಳ ಒಪ್ಪಂದಕ್ಕೆ ಟಿಸಿಎಸ್‌ ಸಹಿ ಹಾಕಿದೆ. ಯುಕೆ ಲೈಫ್‌ ಬ್ಯುಸಿನೆಸ್‌ಅನ್ನು ಬದಲಾಯಿಸುವ ಗುರಿಯಲ್ಲಿ ಒಪ್ಪಂದ ಏರ್ಪಟ್ಟಿದೆ ಎಂದು ಟಾಟಾ ಹೇಳಿದೆ.  ಮೂಲಗಳ ಪ್ರಕಾರ ಇದು 500 ಮಿಲಿಯನ್‌ ಡಾಲರ್‌ಗೂ ದೊಡ್ಡ ಮೊತ್ತದ ಒಪ್ಪಂದ ಎನ್ನಲಾಗಿದೆ. ಈ ತ್ರೈಮಾಸಿಕದಲ್ಲಿ ಹೆಚ್ಚೇನೂ ಒಪ್ಪಂದ ಗಳಿಸದೇ ಇದ್ದ ಟಿಸಿಎಸ್‌ಗೆ ಇದು ದೊಡ್ಡ ಒಪ್ಪಂದ ಎನ್ನಲಾಗಿದೆ.

Gayathri SG

Recent Posts

ಬೈಕ್ ಗೆ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯ ಬರುವ ಅಣ್ಣಿಗೇರಿ ಸಮೀಪ ಕೊಂಡಿಕೊಪ್ಪ ಕ್ರಾಸ್‌ ಬಳಿ ಬಸ್‌ ಚಾಲಕ ರಾಂಗ್…

6 mins ago

ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

ಗಚ್ಚಿನಗಕಟ್ಟಿ ಕಾಲೋನಿಯಿಂದ ಭಾನುವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ…

12 mins ago

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕತ್ತೆ ಕಿರುಬ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕತ್ತೆ ಕಿರುಬ ( ಹೈನಾ ) ಶ್ವಾನ ಕಾಣಿಸಿಕೊಂಡಿದೆ.

22 mins ago

ಲೋಕಸಭಾ ಚುನಾವಣೆ : ಮತದಾರನಿಗೆ ಕಾಂಗ್ರೆಸ್​ ಶಾಸಕನಿಂದ ಕಪಾಳಮೋಕ್ಷ

ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ವೈಎಸ್​ಆರ್​ ಕಾಂಗ್ರೆಸ್​ನ ಶಾಸಕ ಎ ಶಿವಕುಮಾರ್ಮ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ…

29 mins ago

ಧರ್ಮ ಪಾಲನೆಯ ಅಸಡ್ಡೆಯೇ ಸಂಘರ್ಷಕ್ಕೆ ಕಾರಣ: ಪಿ.ಎ. ಹನೀಫ್

ಆಯಾ ಧರ್ಮಗಳು ಸಾರಿದ ತತ್ವ ಆದರ್ಶಗಳ ಪಾಲನೆ ಬಗೆಗಿನ ಜನರ ಅಸಡ್ಡೆಯೇ ಇಂದಿನ ಮನುಷ್ಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. ಸತ್ಯ,…

42 mins ago

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಚಿತ್ರದ ಶೀರ್ಷಿಕೆ ಅನಾವರಣ

ಧ್ರುವ ಸರ್ಜಾ ನಿವಾಸದಲ್ಲಿ ಅಶ್ವಗ್ರೀವ ಶೀರ್ಷಿಕೆ ಅನಾವರಣ

44 mins ago