News Karnataka Kannada
Friday, April 12 2024
Cricket
ದೆಹಲಿ

ಏಪ್ರೀಲ್‌ನಲ್ಲಿ ಹೆಚ್ಚಲಿದೆ ಬಿಸಿಲಿನ ಧಗೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ ಸಂದೇಶ

ಈಗಾಗಲೇ ಬಿಸಿಲಿನ ಧಗೆಯಲ್ಲಿ ಬೆಂದಿರುವ ಜನರಿಗೆ ಹವಮಾನ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ. ಏಪ್ರಿಲ್ ತಿಂಗಳ ಮೊದಲ ದಿನವೇ ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ.
Photo Credit : NewsKarnataka

ನವದೆಹಲಿ: ಈಗಾಗಲೇ ಬಿಸಿಲಿನ ಧಗೆಯಲ್ಲಿ ಬೆಂದಿರುವ ಜನರಿಗೆ ಹವಮಾನ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ. ಏಪ್ರಿಲ್ ತಿಂಗಳ ಮೊದಲ ದಿನವೇ ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಬಿಸಿಲಿನ ವಾತಾವರಣ ಮತ್ತು ಅತ್ಯಧಿಕ ಉಷ್ಣಾಂಶ ದಾಖಲಾಗಲಿದೆ.

ಆದರೆ ಜೂನ್‌ ಒಂದರ ಒಳಗಾಗಿ ಇನ್ನಷ್ಟು ತಾಪಮಾನದಲ್ಲಲಿ ಏರಿಕೆ ಆಗಲಿದ್ದು ಅದಕ್ಕೆ ಜನರು ತಯಾರಿರಬೇಕು ಎಂದು ಇಲಾಖೆ ತಿಳಿಸಿದೆ.ಭಾರತೀಯ ಹವಮಾನ ಇಲಾಖೆಯ ಮಾಹಿತಿಯ ಪ್ರಕಾರ ಈ ವರ್ಷದ ಏಪ್ರಿಲ್ ತಿಂಗಳು ಅತ್ಯಂತ ಸುಡೋ ಬಿಸಿಲಿನ ವಾತಾವರಣಕ್ಕೆ ಸಾಕ್ಷಿಯಾಗಲಿದೆ. ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಆಂಧ್ರ ಪ್ರದೇಶ, ಪೂರ್ವ ಮಧ್ಯ ಪ್ರದೇಶದಲ್ಲಿ ರಣ ಬಿಸಿಲಿನ ವಾತಾವರಣ ಎದುರಾಗಲಿದೆ ಎನ್ನುವ ಮಾಹಿತಿ ನೀಡಿದೆ.

ಇನ್ನು ಏಪ್ರಿಲ್‌ ತಿಂಗಳಲ್ಲಿ ಭಾರತದ ಮಧ್ಯ, ಉತ್ತರ, ದಕ್ಷಿಣದ 6 ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ವಾತಾವರಣ ಕಾಡಲಿದೆ ಎಂದು ಹೇಳಲಾಗಿದೆ. ಇಡೀ ತಿಂಗಳು ರಣ ಬಿಸಿಲು ತಡೆಯಲು ತಯಾರಿರಬೇಕು.

ಬಿಸಿಲಿನ ಬೇಗೆ ತಾಳಲಾರದೇ ಕೃತಕ ತಂಪು ಪಾನಿಗಳು ಮತ್ತು ಐಸ್ ಕ್ರೀಮ್ ಹೆಚ್ಚಾಗಿ ಸೇವಿಸುತ್ತಿರುವುದರಿಂದ ವೈರಲ್ ಫೀವರ್ ಹೆಚ್ಚಾಗುತ್ತಿದೆ. ರಣ ಬಿಸಿಲಿನ ಸಮಯದಲ್ಲಿ ಫ್ರಿಡ್ಜ್‌ನಲ್ಲಿಟ್ಟ ನೀರು ಮತ್ತು ಹೆಚ್ಚು, ಹೆಚ್ಚು ಐಸ್‌ಕ್ರೀಮ್‌ ತಿನ್ನುವುದರಿಂದ ದೂರ ಉಳಿಯೋದು ಒಳ್ಳೆಯದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು