ನವದೆಹಲಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಬ್ಬಿನ ಖರೀದಿ ದರ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಭೆ ಅನುಮತಿ ನೀಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬಿನ ದರ ಪ್ರತಿ ಕ್ವಿಂಟಾಲ್ಗೆ 340 ರೂಪಾಯಿಗೆ ಹೆಚ್ಚಿಳ ಮಾಡಲಾಗಿದೆ. ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು ಪ್ರಸಕ್ತ 2023-24 ರ ಹಂಗಾಮಿನ ಕಬ್ಬಿನ ಎಫ್ಆರ್ಪಿಗಿಂತ ಸುಮಾರು ಶೇ.8ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಪ್ರತಿ ಕ್ವಿಂಟಲ್ಗೆ 315 ರೂಪಾಯಿದಿಂದ 340 ರೂ.ಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್ಆರ್ಪಿ ಪ್ರತಿ ಕ್ವಿಂಟಲ್ಗೆ 25 ರೂ. ಹೆಚ್ಚಿಸಿದಂತಾಗಿದೆ.