ದೆಹಲಿ: ದೆಹಲಿಯಲ್ಲಿ ಚಳಿ ಹೆಚ್ಚಾದ ಹಿನ್ನೆಲೆ ಜನವರಿ 12ರವರೆಗೆ ನರ್ಸರಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಸಚಿವರಾದ ಅತಿಶಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಜನವರಿ 1 ರಿಂದ ಚವಳಿಗಾಲದ ರಜೆಯನ್ನು ಘೋಷಿಸಲಾಗಿತ್ತು, ನಾಳೆಯಿಂದ ಶಾಲೆಗಳು ಪುನಃ ಆರಂಭಗೊಳ್ಳಬೇಕಿತ್ತು, ಆದರೆ ಈ ರಜೆಯನ್ನು 12ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.
ಗೌತಮ್ ಬುದ್ಧ ನಗರ ಜಿಲ್ಲಾಡಳಿತವು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಎಲ್ಲಾ ಶಾಲೆಗಳಿಗೆ 8 ಜನವರಿ 14 ರವರೆಗೆ ರಜೆ ಇರುತ್ತದೆ ಎಂದು ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಶೀತ ದಿನದಿಂದ ತೀವ್ರ ಚಳಿಯ ವಾತಾವರಣ ಮುಂದುವರೆಯಲಿದೆ.