News Karnataka Kannada
Saturday, April 27 2024
ದೆಹಲಿ

ಸನಾತನ ಅನ್ನೋದೇ ಏಕೈಕ ಧರ್ಮ, ಉಳಿದವೆಲ್ಲವೂ ಪಂಥಗಳು, ಪೂಜಾ ವಿಧಾನಗಳು: ಯೋಗಿ ​

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಎಂದು ಸಿಎಂ ಯೋಗಿ ಅದಿತ್ಯನಾಥ್‌  ಹೇಳಿದ್ದಾರೆ.
Photo Credit : Twitter

ನವದೆಹಲಿ: ಸನಾತನ ಧರ್ಮದ ಮಹತ್ವವನ್ನು ಒತ್ತಿಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಜಗತ್ತಿನಲ್ಲಿ ಸನಾತನ ಧರ್ಮ ಅನ್ನೋದೇ ಏಕೈಕ ಧರ್ಮವಾಗಿದೆ. ಉಳಿದವೆಲ್ಲವೂ ಪಂಥಗಳು ಅಥವಾ ಪೂಜಾ ವಿಧಾನಗಳಾಗಿವೆ ಎಂದು ಹೇಳಿದ್ದಾರೆ.

ಸನಾತನ ಧರ್ಮದ ಮೇಲಿನ ಯಾವುದೇ ದಾಳಿಯು ಇಡೀ ಮಾನವಕುಲವನ್ನು ಅಪಾಯಕ್ಕೆ ತಳ್ಳಬಹುದು ಎಂದು ತಿಳಿಸಿದ್ದಾರೆ. ಸನಾತನ ಧರ್ಮವನ್ನು ದೇಶದಿಂದ ನಿರ್ಮೂಲನೆ ಮಾಡಬೇಕು ಎಂದು ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಅವರ ಹೇಳಿಕೆಯ ಬೆನ್ನಲ್ಲಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಮಾತು ಹೇಳಿದ್ದಾರೆ.

ಸನಾತನ ಧರ್ಮ ಅನ್ನೋದು ಏಕೈಕ ಧರ್ಮ, ಉಳಿದವು ಎಲ್ಲಾ ಪಂಥಗಳು ಮತ್ತು ಪೂಜಾ ವಿಧಾನಗಳು ಎಂದು ಆದಿತ್ಯನಾಥ್ ಅವರು ಗೋರಖ್‌ಪುರದ ಗೋರಖನಾಥ ದೇವಾಲಯದಲ್ಲಿ ನಡೆದ ‘ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ’ದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

ಮಹಾಂತ್ ದಿಗ್ವಿಜಯ್ ನಾಥ್ ಅವರ 54 ನೇ ಪುಣ್ಯತಿಥಿ ಮತ್ತು ಮಹಂತ್ ಅವೈದ್ಯನಾಥ್ ಅವರ ಒಂಬತ್ತನೇ ಪುಣ್ಯತಿಥಿಯ ನಿಮಿತ್ತ ಏಳು ದಿನಗಳ ಯಾಗ ನಡೆಯಿತು. ದೇಗುಲದ ದಿಗ್ವಿಜಯ್ ನಾಥ್ ಸ್ಮೃತಿ ಸಭಾಂಗಣದಲ್ಲಿ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿದ ಗೋರಕ್ಷಪೀಠಾಧೀಶ್ವರ ಆದಿತ್ಯನಾಥ್, ಶ್ರೀಮದ್ ಭಾಗವತದ ಸಾರವನ್ನು ಅರಿಯಲು ಮುಕ್ತ ಮನಸ್ಸು ಹೊಂದುವ ಮಹತ್ವವನ್ನು ಒತ್ತಿ ಹೇಳಿದರು. “ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ವಿಶಾಲತೆಯನ್ನು ಗ್ರಹಿಸಲು ಹೆಣಗಾಡುತ್ತವೆ” ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು