News Karnataka Kannada
Wednesday, May 01 2024
ದೆಹಲಿ

ಬೋರ್ನ್‌ವೀಟಾವನ್ನು ‘ಆರೋಗ್ಯ ಪಾನೀಯ’ ವಿಭಾಗದಿಂದ ತೆಗೆದು ಹಾಕಿ: ಕೇಂದ್ರ ಸೂಚನೆ

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಎಲ್ಲಾ ಇಕಾಮರ್ಸ್ ಕಂಪನಿಗಳನ್ನು ತಮ್ಮ ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ತಂಪುಪಾನೀಯಗಳನ್ನು ತೆಗೆದುಹಾಕುವಂತೆ ಹೇಳಿದೆ. ಬೋರ್ನ್‌ವಿಟಾವನ್ನು ಕೂಡ ಆರೋಗ್ಯಕರ ಪಾನೀಯಾಗಳ ಸ್ಥಾನದಿಂದ ತೆಗೆದು ಹಾಕುವಂತೆ ಹೇಳಿದೆ
Photo Credit : NewsKarnataka

ನವದೆಹಲಿ:   ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಎಲ್ಲಾ ಇಕಾಮರ್ಸ್ ಕಂಪನಿಗಳನ್ನು ತಮ್ಮ ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ತಂಪುಪಾನೀಯಗಳನ್ನು ತೆಗೆದುಹಾಕುವಂತೆ ಹೇಳಿದೆ. ಬೋರ್ನ್‌ವಿಟಾವನ್ನು ಕೂಡ ಆರೋಗ್ಯಕರ ಪಾನೀಯಾಗಳ ಸ್ಥಾನದಿಂದ ತೆಗೆದು ಹಾಕುವಂತೆ ಹೇಳಿದೆ.

ಬೋರ್ನ್‌ವೀಟಾದಲ್ಲಿ ಸ್ವೀಕಾರಾರ್ಹ ಮಿತಿಗಿಂತ ಹೆಚ್ಚಿನ ಸಕ್ಕರೆ ಮಟ್ಟವಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗನಡೆಸಿದ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ಸಲಹೆ ಕೇಳಿ ಬಂದಿದೆ. ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾಗಿ ‘ಆರೋಗ್ಯ ಪಾನೀಯಗಳು’ ಎಂದು ಬಿಂಬಿಸುತ್ತಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್‌ಸಿಪಿಸಿಆರ್‌ ಈ ಹಿಂದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸಲಹೆ ನೀಡಿತ್ತು.

ದೇಶದ ಆಹಾರ ಕಾನೂನುಗಳಲ್ಲಿ ‘ಆರೋಗ್ಯ ಪಾನೀಯ’ ಎನ್ನುವುದನ್ನು ವ್ಯಾಖ್ಯಾನಿಸಲಾಗಿಲ್ಲ ಮತ್ತು ಅದರ ಅಡಿಯಲ್ಲಿ ಆರೋಗ್ಯ ಪಾನೀಯ ಎಂಬಂತೆ ಬಿಂಬಿಸುವುದು ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಹಾಲಿನ ಉತ್ಪನ್ನ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಲೇಬಲ್ ಮಾಡದಂತೆ ಎಫ್ಎಸ್ಎಸ್ಎಐ ಈ ತಿಂಗಳ ಆರಂಭದಲ್ಲಿ ಇ-ಕಾಮರ್ಸ್ ಪೋರ್ಟಲ್‌ಗೆ ಸೂಚನೆ ನೀಡಿತ್ತು.

ʼʼತಪ್ಪು ಪದಗಳನ್ನು ಬಳಸುವುದು ಗ್ರಾಹಕರನ್ನು ದಾರಿ ತಪ್ಪಿಸಬಹುದು. ಆ ಮೂಲಕ ಆ ಜಾಹೀರಾತುಗಳನ್ನು ತೆಗೆದುಹಾಕಲು ಅಥವಾ ಸರಿಪಡಿಸಲು ವೆಬ್‌ಸೈಟ್‌ಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು