ನವದೆಹಲಿ: ಭಾರತೀಯ ನೌಕಾಪಡೆಯ ಧ್ವಜವನ್ನು ಬದಲಾಯಿಸಲಾಗುತ್ತಿದೆ. ಈ ಬದಲಾವಣೆಯು ಇದೇ ಮೊದಲಲ್ಲ. ಈ ಹಿಂದೆ ವಾಜಪೇಯಿ ಸರ್ಕಾರದ ಅವಧಿಯಲ್ಲಿ ನೌಕಾಪಡೆಯ ಧ್ವಜದಲ್ಲಿ ಇದ್ದ ಜಾರ್ಜ್ ಕ್ರಾಸ್ ತೆಗೆಯಲಾಗಿತ್ತು.
ಆನಂತರ ಬಂದ ಯುಪಿಎ ಸರ್ಕಾರ ಬ್ರಿಟಿಷ್ ಗುರುತಾದ ಜಾರ್ಜ್ ಕ್ರಾಸ್ ಅನ್ನು ಧ್ವಜದಲ್ಲಿ ಮರುಬಳಕೆಗೆ ತಂದಿತ್ತು. ಇದೀಗ ನೌಕಾಪಡೆಯ ಧ್ವಜವು ಮರುವಿನ್ಯಾಸಗೊಂಡು ತನ್ನ ಘೋಷ ವಾಕ್ಯವಾದ “शं नो वरुणः” ಮತ್ತು ಲಾಂಛನ ಒಳಗೊಂಡಂತೆ ಮರುವಿನ್ಯಾಸಗೊಂಡಿದೆ.