News Karnataka Kannada
Monday, April 29 2024
ದೆಹಲಿ

ನಾಳೆಯಿಂದ (ಸೆ.18) ಸಂಸತ್ತಿನ ಅಧಿವೇಶನ, ಮಸೂದೆ ಗ್ರೆನೇಡ್ ಎದುರಿಸಲು ಸಿದ್ಧ ಎಂದ ಕಾಂಗ್ರೆಸ್‌

ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ಘೋಷಣೆಯಾಗಿದೆ. ಒಟ್ಟು 46 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
Photo Credit : Facebook

ನವದೆಹಲಿ: ಸೋಮವಾರದಿಂದ ನಡೆಯಲಿರುವ ಐದು ದಿನಗಳ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ನಡೆಯಲಿರುವ ಚರ್ಚೆ ಯಾವುದು ಎಂಬುದರ ಗುಟ್ಟನ್ನು ಕೇಂದ್ರ ಸರಕಾರ ಬಿಟ್ಟುಕೊಟ್ಟಿಲ್ಲ. ಆದರೆ ಕಾಂಗ್ರೆಸ್‌ ಅಧಿವೇಶನದಲ್ಲಿ ಸಿಡಿಯಬಹುದಾದ ಯಾವುದೇ ಮಸೂದೆ ಗ್ರೆನೇಡ್ ಎದುರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ತೀವ್ರ ಕುತೂಹಲ ಕೆರಳಿಸಿರುವಂತೆಯೇ, ಎಲ್ಲ ಪಕ್ಷಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಇಂದು ಸಂಜೆ ಸರ್ವಪಕ್ಷ ನಾಯಕರೊಂದಿಗೆ ಸಭೆಯನ್ನು ಕರೆಯಲಾಗಿದೆ.

ಯಾವುದೇ ಸಂಭಾವ್ಯ ಹೊಸ ಶಾಸನದ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತು ಕೆಲವು ಚರ್ಚೆಗಳು ನಡೆದಿವೆ. ಸಂಸತ್ತಿನ ವಿವಿಧ ಇಲಾಖೆಯ ಸಿಬ್ಬಂದಿಗೆ ಸಿಬ್ಬಂದಿಗೆ ಹೊಸ ಡ್ರೆಸ್ ಕೋಡ್ ಗೆ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಸಂಸತ್ ಸಿಬಂದಿಯ ಹೊಸ ಡ್ರೆಸ್‌ ಕೋಡ್‌ನಲ್ಲಿ ಕಮಲ ಚಿಹ್ನೆ ಇರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದು ಬಿಜೆಪಿಯ ತೀರಾ ಸಣ್ಣತನದ ವರ್ತನೆಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು