ಹೊಸದಿಲ್ಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ, ಮತ್ತು ನಾಗಾಲ್ಯಾಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಹೊರಬೀಳಲಿದೆ.
ತ್ರಿಪುರಾ, ನಾಗಾಲ್ಯಾಂಡ್ ಬಿಜೆಪಿ ತೆಕ್ಕೆಗೆ ಹೋಗಲಿವೆ. ನಾಗಾಲ್ಯಾಂಡ್ ಅತಂತ್ರವಾಗಲಿದೆ. ಎಂದು ಸಮೀಕ್ಷೆಗಳು ಹೇಳಿವೆ. ಫೆ.16ರಂದು ತ್ರಿಪುರಾ ಫೆ.27ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ತ್ರಿಪುರಾದಲ್ಲಿ ಪ್ರಾದೇಶಿಕ ಪಕ್ಷ ತಿಪ್ರ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮತ ಎಣಿಕೆಗೆ ಸಿದ್ಧತೆ ನಡೆದಿದೆ.