Categories: ದೆಹಲಿ

ನವದೆಹಲಿ: ದೆಹಲಿಗೆ ಆಗಮಿಸಿದ ಕಾಂಬೋಡಿಯಾದ ರಾಜ

ನವದೆಹಲಿ: ಕಾಂಬೋಡಿಯಾದ ರಾಜ ನೊರೊಡೊಮ್ ಸಿಹಾಮೊನಿ ಅವರು ಭಾರತಕ್ಕೆ ತಮ್ಮ ಚೊಚ್ಚಲ ರಾಜ್ಯ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಸ್ವಾಗತಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾರತ ಮತ್ತು ಕಾಂಬೋಡಿಯಾ ನಡುವಿನ ನಾಗರಿಕ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಇದು ಒಂದು ಅವಕಾಶ” ಎಂದು ಹೇಳಿದ್ದಾರೆ. ಕಾಂಬೋಡಿಯಾದ ರಾಜ ಸಿಹಾಮೋನಿ ಮೂರು ದಿನಗಳ ಭಾರತದಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. 1963ರಲ್ಲಿ ಕಾಂಬೋಡಿಯಾದ ಅಂದಿನ ರಾಜ (ಸಿಹಾಮೋನಿ ಅವರ ತಂದೆ) ಭಾರತಕ್ಕೆ ಭೇಟಿ ನೀಡಿದ್ದರು.

ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸಿಹಾಮೋನಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಗುವುದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣ ಕೂಟವನ್ನು ಆಯೋಜಿಸಿದ್ದಾರೆ. ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಿಹಾಮೋನಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

Ashika S

Recent Posts

ಅಧಿಕ ಬಿಸಿಲಿನ ತಾಪಮಾನ, ಬಿಸಿಗಾಳಿಯಿಂದ ತತ್ತರಿಸಿದ ಧಾರವಾಡ

ಇದೀಗ ಅಧಿಕ ಬಿಸಿಲಿನ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸುತ್ತಿದೆ. ಧಾರವಾಡ ಜಿಲ್ಲೆಯ ಜನರಂತೂ ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿದ್ದಾರೆ.

10 mins ago

ಪಾಕಿಸ್ತಾನದಿಂದಲೂ ಬಾಲರಾಮನ ದರ್ಶನ ಪಡೆಯಲು ಬರುತ್ತಿರುವ ಭಕ್ತರು

ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದು, ಇದೀಗ ಪಾಕಿಸ್ತಾನದಿಂದಲೂ ಇಂದು ಬಾಲರಾಮನ ದರ್ಶನ ಪಡೆಯಲು…

24 mins ago

ರಾಜಸ್ಥಾನ್‌ ರಾಯಲ್ಸ್‌ನಿಂದ ನಟ ಕಿಚ್ಚ ಸುದೀಪ್‌ಗೆ ಜೆರ್ಸಿ ಉಡುಗೊರೆ

ರಾಜಸ್ಥಾನ್‌ ರಾಯಲ್ಸ್‌ ತಂಡವು ನಟ ಕಿಚ್ಚ ಸುದೀಪ್‌ ಅವರಿಗೆ ರಾಜಸ್ಥಾನ್‌ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.

49 mins ago

ನೋಡ ನೋಡುತ್ತಿದ್ದಂತೆಯೇ ಶಿವಸೇನೆ ಉಪನಾಯಕಿ ತೆರಳಬೇಕಿದ್ದ ಹೆಲಿಕಾಪ್ಟರ್​ ಪತನ

ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆ ತೆರಳಬೇಕಿದ್ದ ಹೆಲಿಕಾಪ್ಟರ್​ ಪತನಗೊಂಡ ದೃಶ್ಯ ಸಮೇತ ಘಟನೆ ಮಹಾದ್​ನಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್​​ ಯಾವುದೇ…

50 mins ago

ಕೆರೆ ಮೀನು ತಿಂದು ಇಬ್ಬರು ಮೃತ್ಯು: 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೀನು ತಿಂದು ಇಬ್ಬರು ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾದ ಘಟನೆ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.

1 hour ago

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ; ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ!

ಮಾಧ್ಯಮವನ್ನು ಸಂವಿಧಾನದ 4ನೇ ಆಯಾಮ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ನಡೆಯುವ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಧ್ಯಮಗಳನ್ನು ಮಾಡುತ್ತವೆ. ಸತ್ಯವನ್ನು…

1 hour ago