News Karnataka Kannada
Saturday, April 27 2024
ದೆಹಲಿ

ದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

New Delhi: Prime Minister Narendra Modi at the red fort celebrations
Photo Credit : Twitter

ದೆಹಲಿ:  75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಈ ದೇಶ ನಮನ ಸಲ್ಲಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮಾತುಗಳು

  • ಮುಂದಿನ 25 ವರ್ಷಗಳಲ್ಲಿ ಭಾರತ ಬಲಶಾಲಿ ದೇಶವಾಗಿ ಹೊರಹೊಮ್ಮಬೇಕು.
  • ಹೊಸಹಾದಿಯಲ್ಲಿ ನಡೆಯುವುದಕ್ಕೆ ಮುಂದಿನ 5 ವರ್ಷಗಳಿಗಾಗಿ ನಾವು ‘ಪಂಚಪ್ರಾಣ’ವನ್ನು ಅಳವಡಿಸಿಕೊಳ್ಳಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ದೊಡ್ಡ ಸಂಕಲ್ಪ, ಗುಲಾಮಿತನದ ಎಲ್ಲ ಶೃಂಖಲೆಗಳಿಂದ ಹೊರಬರುವುದು, ನಾವು ಯಾವುದಕ್ಕೆ ವಾರಸುದಾರರಾಗಿದ್ದೇವೋ ಆ ಬಗ್ಗೆ ಹೆಮ್ಮೆ ಹೊಂದುವುದು, ಏಕತೆ, ಐದನೆಯದಾಗಿ ಪ್ರಧಾನಿ-ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ನಾಗರೀಕರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು.
  • ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಧಾನಿ ಮೋದಿಯವರು ಅಂಬೇಡ್ಕರ್, ನೆಹರು, ಸಾವರ್ಕರ್, ಬುಡಕಟ್ಟು ಹೋರಾಟಗಾರರಾರದ ಬಿರ್ಸಾ ಮುಂಡಾ ಸೇರಿದಂತೆ ಹಲವು ಸ್ವಾತಂತ್ರ್ಯ ಕಲಿಗಳು ಹಾಗೂ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಎಲ್ಲ ಮಹಿಳಾ ಹೋರಾಟಗಾರರನ್ನು ನೆನಪಿಸಿಕೊಂಡರು.
  • ಪ್ರಜಾಪ್ರಭುತ್ವ ಮಾದರಿಗಳ ತಾಯಿ ಭಾರತ. ಸ್ವಾತಂತ್ರ್ಯ ಸಿಕ್ಕ ಪ್ರಾರಂಭದಲ್ಲಿ ಈ ದೇಶ ಕೆಲ ದಿನಗಳಲ್ಲೇ ವಿಫಲವಾಗುವುದೆಂಬ ಅನುಮಾನಗಳಿದ್ದವು. ಆದರೆ ಜನ ಅದನ್ನು ತಮ್ಮ ಸಾಮೂಹಿಕ ಯತ್ನದಿಂದ ಸುಳ್ಳಾಗಿಸಿದರು.
  • ನಮ್ಮದು ಮಹತ್ವಾಕಾಂಕ್ಷಿಗಳ ನೆಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಜನರೂ ಭಾಗವಹಿಸುವಿಕೆ ಬಯಸುತ್ತಾರೆ. ಇದನ್ನು ಎಲ್ಲ ಸರ್ಕಾರಗಳೂ ಅರ್ಥ ಮಾಡಿಕೊಳ್ಳಬೇಕು.
  • ಭಾರತ ಮೊದಲು ಎಂಬ ಮಂತ್ರವೇ ನಮ್ಮನ್ನು ಮುನ್ನೆಡಸಬೇಕಿದೆ.
  • ಭಾರತದಲ್ಲೇ ತಯಾರಿಸುವ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸುವುದಕ್ಕೆ ಖಾಸಗಿ ಕಂಪನಿಗಳು ಮುಂದೆ ಬರಬೇಕು.
  • ಇವತ್ತು ಚಿಕ್ಕ ಮಗುವೂ ಆತ್ಮನಿರ್ಭರ ಭಾರತ ಎಂಬ ಘೋಷಣೆಯನ್ನು ಹೇಳುತ್ತಿದೆ.
  • ಆಟದ ಮೈದಾನದಿಂದ ಯುದ್ಧಭೂಮಿವರೆಗೆ ಮಹಿಳೆಯರು ಮುಂದೆ ಬಂದಿದ್ದಾರೆ. ಮುಂದಿನ 25 ವರ್ಷಗಳ ಭಾರತದ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಲಿದೆ.
  • ಮಹಿಳೆಯರ ಘನತೆ ಕುಗ್ಗಿಸುವ ಏನನ್ನೂ ಮಾಡುವುದಿಲ್ಲ ಎಂಬ ಸಂಕಲ್ಪ ಎಲ್ಲರೂ ಮಾಡಬೇಕಿದೆ.
  • ಶಾಸ್ತ್ರಿಯವರ ಜೈ ಜವಾನ್-ಜೈ ಕಿಸಾನ್ ಜತೆ ವಾಜಪೇಯಿಯವರು ಜೈ ವಿಜ್ಞಾನ್ ಜೋಡಿಸಿದರು. ಇವತ್ತು ನಮ್ಮ ಯುವಜನ ಸಂಶೋಧನೆ ಮತ್ತು ಅಭಿವೃದ್ಧಿಗಳತ್ತ ಹೊರಳುತ್ತಿದ್ದಾರೆ. ಮುಂದಿನ ಆವಿಷ್ಕಾರಗಳು ಬರಲಿರುವುದು ಸಮುದ್ರದಾಳ ಮತ್ತು ಬಾಹ್ಯಾಕಾಶದಿಂದ. ಈ ನಿಟ್ಟಿನಲ್ಲಿ ನಮ್ಮ ಯುವಕರು ತಮ್ಮ ಪ್ರತಿಭೆ ತೋರುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು