News Karnataka Kannada
Tuesday, April 30 2024
ದೆಹಲಿ

ದೆಹಲಿ: ಸಚಿವ ಹರ್ದೀಪ್ ಸಿಂಗ್ ಪುರಿ ಇವರನ್ನು ಭೇಟಿಯಾದ ಸಂಸದ ಬಿ. ವೈ.ರಾಘವೇಂದ್ರ

Shiva 1
Photo Credit : By Author

ದೆಹಲಿ: ಸಂಸದರಾದ ಬಿ. ವೈ.ರಾಘವೇಂದ್ರ ಅವರು ಇಂದು ಸಂಸತ್ ಭವನದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಇವರನ್ನು ಭೇಟಿಯಾಗಿ ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 2,472 ಕೆ.ಎಲ್ ಹಿಂದಿನ ಹಂಚಿಕೆಗೆ ಹೆಚ್ಚುವರಿಯಾಗಿ 3,000 ಕೆ.ಎಲ್ ಸಬ್ಸಿಡಿ ರಹಿತ ಪಿ.ಡಿ.ಎಸ್. ಸೀಮೆಎಣ್ಣೆಯನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ತಿಳಿಸಿದರು.

ಕರ್ನಾಟಕ ಸರ್ಕಾರಕ್ಕೆ 12,195 ಕೆ.ಎಲ್ ನೈಜ ಹಂಚಿಕೆಯಲ್ಲಿ, ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 5,472 ಕೆ.ಎಲ್ಮಾತ್ರ ಮಂಜೂರಾಗಿದೆ. ಆದ್ದರಿಂದ, ಕರ್ನಾಟಕದ ಬಡ ಮೀನುಗಾರರಿಗೆ ಸಹಾಯ ಮಾಡುಲು ಉಳಿದ 6,723 ಕೆಎಲ್‌ಗಳನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಲು ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ವಿನಂತಿಸಿದರು.

ಮಾನ್ಯ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಅತೀ ಶೀಘ್ರದಲ್ಲಿ ಕರ್ನಾಟಕದ ಉಳಿದ ಕೋಟಾದ ಸೀಮೆಎಣ್ಣೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು