Categories: ದೆಹಲಿ

ನವದೆಹಲಿ: ಇಂದು ಕೇರಳ ಸ್ಟೋರಿ ಚಲನಚಿತ್ರ ಬಿಡುಗಡೆ

ನವದೆಹಲಿ: ಸುದೀಪೊ ಸೇನ್‌ ನಿರ್ದೇಶನದ “ದ ಕೇರಳ ಸ್ಟೋರಿ’ ಶುಕ್ರವಾರ (ಮೇ 5) ಬಿಡುಗಡೆಯಾಗಲಿದೆ. ಚಿತ್ರಕ್ಕೆ ಎ ಪ್ರಮಾಣಪತ್ರವನ್ನು ವಿರೋಧಿಸಿ ಸಲ್ಲಿಸಲಾ­ಗಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿತು.
ಈ ಕುರಿತ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕೇರಳ ಉಚ್ಚ ನ್ಯಾಯಾಲಯಕ್ಕೆ ಆದೇಶಿಸಬೇಕೆಂಬ ಮನವಿಯನ್ನೂ ನಿರಾಕರಿಸಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, “ಈಗಾಗಲೇ ಸಿಬಿಎಫ್ಸಿ ಪ್ರಮಾಣಪತ್ರ ನೀಡಿದೆ.

ನೀವು ಸಿನೆಮಾದ ನಟ, ನಟಿಯರು, ನಿರ್ಮಾಪಕರ ಬಗ್ಗೆ ಯೋಚಿಸಬೇಕು. ಇದಕ್ಕಾಗಿ ಅವರು ತಮ್ಮ ಶ್ರಮವನ್ನು ಹಾಕಿರುತ್ತಾರೆ. ಒಂದು ಚಿತ್ರಕ್ಕೆ ತಡೆ ತರುವ ಯೋಚನೆ ಮಾಡುವ ಮುನ್ನ ನೀವು ಜಾಗರೂಕವಾಗಿ ಯೋಚಿಸಬೇಕು. ಸಿನೆಮಾ ಚೆನ್ನಾಗಿ ಇಲ್ಲದಿದ್ದರೆ ಮಾರುಕಟ್ಟೆಯೇ ಇದನ್ನು ನಿರ್ಧರಿಸುತ್ತದೆ. ನಾವು ಇದನ್ನು ನಿರ್ಧರಿಸುವುದಿಲ್ಲ,’ ಎಂದು ಹೇಳಿತು. ಜಮೀಯತ್‌ ಉಲೇಮಾ-ಎ-ಹಿಂದ್‌ ಸಹಿತ ಕೆಲವು ಸಂಘಟನೆಗಳು ಸಿನೆಮಾ ಬಿಡುಗಡೆಗೆ ತಡೆಕೋರಿ ಅರ್ಜಿ ಸಲ್ಲಿಸಿದ್ದವು.

Umesha HS

Recent Posts

ಮದುವೆಯಲ್ಲಿ ಐಸ್ ಕ್ರೀಂ​ ಸೇವಿಸಿದ 80ಕ್ಕೂ ಹೆಚ್ಚು ಜನರು ಅಸ್ವಸ್ಥ

ಮದುವೆಯಲ್ಲಿ ಐಸ್ ಕ್ರೀಂ​ ಸೇವಿಸಿದ 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.ಸಾತನೂರು ಸರ್ಕಲ್ ಬಳಿಯ…

30 seconds ago

ಮಲೆನಾಡ ನಾಸ್ತುಷ್ ಪ್ರದೀಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೇರಿಕಾದ ಆಟಗಾರ

ಅಮೆರಿಕ ರಾಷ್ಟ್ರೀಯ ತಂಡದದಲ್ಲಿ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಮೂಡಿಗೆರೆಯ ಪ್ರತಿಭೆ ನಾಸ್ತುಷ್ ಪ್ರದೀಪ್, ಇದೇ…

20 mins ago

ಖೂಬಾ ಲಿಂಗಾಯತ ಹೋರಾಟದ ವಿರೋಧಿ : ಓಂಪ್ರಕಾಶ ರೊಟ್ಟೆ

ಕೇಂದ್ರ ಸಚಿವ ಭಗವಂತ ಖೂಬಾ ಅವರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿರೋಧಿಯಾಗಿದ್ದು, ಲಿಂಗಾಯತ ಧರ್ಮೀಯರು ಲೋಕಸಭೆ ಚುನಾವಣೆಯಲ್ಲಿ ಅವರನ್ನು…

31 mins ago

ಜೆಡಿಎಸ್‌ ತೆನೆಹೊತ್ತ ಮಹಿಳೆ ಚಿಹ್ನೆ ಬದಲಿಸಲಿ : ಬಾಬುರಾವ್‌ ಪಾಸ್ವಾನ್‌

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಗ ಎಚ್‌.ಡಿ.ರೇವಣ್ಣ, ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣನ ಕರ್ಮಕಾಂಡಗಳಿಂದ ರಾಜ್ಯದ ಮಾನ ಹರಾಜಾಗಿದೆ. ಸಾವಿರಾರು ಮಹಿಳೆಯರ…

45 mins ago

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ : ಎಂ.ಜಿ. ಮುಳೆ

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ' ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ…

55 mins ago

ಬಿಪಿ-ಶುಗರ್ ರೋಗಿಗಳ ಅಡುಗೆಗೆ ಈ ಎಣ್ಣೆ ಉತ್ತಮ

ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಅತ್ಯಗತ್ಯ. ಹೆಚ್ಚಿನ ಭಾರತೀಯ ಆಹಾರ ಉತ್ಪನ್ನಗಳಲ್ಲಿ ತೈಲವು ಪ್ರಮುಖ ಅಂಶವಾಗಿದೆ. ಹೀಗಾಗಿ ಎಷ್ಟೋ ಜನ ಬಳಸುವ…

1 hour ago