News Karnataka Kannada
Monday, April 29 2024
ದೆಹಲಿ

ಹೊಸದಿಲ್ಲಿ: ಗೃಹ ಬಳಕೆ ಸಿಲಿಂಡರ್‌ 50 ರೂ., ವಾಣಿಜ್ಯ ಬಳಕೆ ಸಿಲಿಂಡರ್‌ಗೆ 350 ರೂ. ಏರಿಕೆ

ಹೊಸ ಹಣಕಾಸು ವರ್ಷದ ಮೊದಲ ದಿನ ಎಲ್​​ಪಿಜಿ ದರವನ್ನು ಕಡಿಮೆ ಮಾಡಲಾಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ. ಇನ್ನು 5ಕೆಜಿ ಎಫ್​ಟಿಎಲ್ (ಫ್ರೀ ಟ್ರೇಡ್​ ಎಲ್​ಪಿಜಿ)​ ಸಿಲಿಂಡರ್​ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. 
Photo Credit : News Kannada

ಹೊಸದಿಲ್ಲಿ: ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ 50 ರೂ. ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ 350 ರೂ. ಏರಿಕೆ ಮಾಡುವ ಮೂಲಕ ತೈಲ ಕಂಪನಿಗಳು ಜನರಿಗೆ ಶಾಕ್‌ ನೀಡಿವೆ. ಅದರಲ್ಲೂ ಚುನಾವಣೆ ಎದುರಿಸುತ್ತಿರುವ ಕರ್ನಾಟಕದಲ್ಲಿ ವಿಪಕ್ಷಗಳ ಪಾಲಿಗೆ ಸರಕಾರವನ್ನು ಟೀಕಿಸಲು ಅತ್ಯುತ್ತಮ ಅಸ್ತ್ರ ಸಿಕ್ಕಿದಂತಾಗಿದೆ.

ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಲವು ತಿಂಗಳುಗಳ ಕಾಲ ಗೃಹಬಳಕೆಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿರಲಿಲ್ಲ. ಆದರೆ ಇಂದಿನಿಂದ ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಾಗಿದೆ. ಇದರಿಂದ ಜನಸಾಮಾನ್ಯರ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಹೋಟೆಲ್‌ನಲ್ಲಿ ತಿನ್ನುವವರಿಗೂ ಬೆಲೆ ಏರಿಕೆಬಿಸಿ ತಟ್ಟಲಿದೆ.

14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ನ ಬೆಲೆ ₹ 50 ಏರಿಕೆಯಾಗಿದೆ. ಈ ಪರಿಷ್ಕರಣೆಯೊಂದಿಗೆ ಗೃಹಬಳಕೆಯ ಸಿಲಿಂಡರ್ ಬೆಲೆ 1103 ರೂ. ಆಗಲಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 350.50 ರೂ. ಏರಿಕೆಯಾಗಿದ್ದು, ಈ ಹೆಚ್ಚಳದೊಂದಿಗೆ 2119.50 ರೂ. ಆಗಲಿದೆ.

ಕಳೆದ 6 ತಿಂಗಳಿಂದ ಹೃಹ ಬಳಕೆ ಸಿಲಿಂಡರ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೀಗ ವಾಣಿಜ್ಯ ಬಳಕೆಯ ಸಿಲಿಂಡರ್‌ ಮಾತ್ರವಲ್ಲ ಗೃಹ ಬಳಕೆಯ ಸಿಲಿಂಡರ್‌ ದರವೂ ಹೆಚ್ಚಾಗಿದೆ. ಸ್ಥಳೀಯ ತೆರಿಗೆಗಳಿಂದಾಗಿ ಅಡುಗೆ ಅನಿಲದ ಬೆಲೆ ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ.

ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಮಾಡುತ್ತಾರೆ. ಪ್ರತಿ ಕುಟುಂಬ ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ. ಅದಕ್ಕಿಂತ ಹೆಚ್ಚಾದರೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ನೀಡಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು