News Karnataka Kannada
Thursday, April 25 2024
ದೆಹಲಿ

ಹೃದಯಾಘಾತಕ್ಕೆ ಪತಿ ಬಲಿ: ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು

ಹೃದಯಾಘಾತಕ್ಕೆ ಪತಿ ಬಲಿಯಾಗಿದ್ದು, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
Photo Credit : News Kannada

ನವದೆಹಲಿ: ಹೃದಯಾಘಾತಕ್ಕೆ ಪತಿ ಬಲಿಯಾಗಿದ್ದು, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಅಭಿಷೇಕ್‌ ಅಹ್ಲುವಾಲಿ(25ವರ್ಷ) ಹೃದಯಾಘಾತದಿಂದ ಮೃತಪಟ್ಟ ವಿವಾಹಿತ. ಈತ ಸಾವನಪ್ಪಿದ 24 ಗಂಟೆಗಳ ಬಳಿಕ ಪತ್ನಿ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ನವಜೋಡಿ ಕಳೆದ ವರ್ಷ ನವೆಂಬರ್‌ 30 ರಂದು ವಿವಾಹವಾಗಿದ್ದರು. ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್‌ಗೆ ಎದೆನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದು ಪತಿಯನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಿದರು. ನಂತರ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪತಿಯ ಮರಣದ ಆಘಾತ ಸಹಿಸಲಾಗದೆ ಅಂಜಲಿ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಸಾವನಪ್ಪಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು