ನವದೆಹಲಿ: ಕಿಕ್ಕಿರಿದು ಜನ ತುಂಬಿದ್ದ ದೆಹಲಿ ಮೆಟ್ರೋ ರೈಲಿನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆಯೇ ಹಸ್ತಮೈಥುನ ಮಾಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ದೆಹಲಿ ಮೆಟ್ರೋದ ‘ರೆಡ್ ಲೈನ್ನಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ರಕ್ಷಾಬಂಧನ ಹಬ್ಬದ ನಿಮಿತ್ತ ರೈಲಿನಲ್ಲಿ ಕಿಕ್ಕಿರಿದು ಜನ ತುಂಬಿತ್ತು. ಇದೇ ಕೋಚ್ನಲ್ಲಿ ತಾಯಿ ಮತ್ತು ಮಗಳ ಪ್ರಯಾಣಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆ ಸ್ಖಲನ ಮಾಡಿರುವುದನ್ನು ತಾಯಿ ನೋಡಿ, ತಕ್ಷಣ ಮಗಳನ್ನು ಕೆರೆದುಕೊಂಡು ಸೀಲಂಪುರ ನಿಲ್ದಾಣದಲ್ಲಿ ಇಳಿದಿದ್ದಾರೆ. ಘಟನೆಯನ್ನು ಗಮನಿಸಿದ ಇಬ್ಬರು ಸಹ ಪ್ರಯಾಣಿಕರು ಆ ವ್ಯಕ್ತಿಯನ್ನು ಹಿಡಿದು ಶಾಹದಾರ ನಿಲ್ದಾಣದಲ್ಲಿರುವ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಂತರ ಈ ಆರೋಪಿಯನ್ನು ಮೆಟ್ರೋ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.