News Karnataka Kannada
Wednesday, April 24 2024
Cricket
ದೆಹಲಿ

ಸಾಲದ ಸುಳಿಯಲ್ಲಿದೆ ಭೂಲೋಕದ ಸ್ವರ್ಗ ಮಾಲ್ಡೀವ್ಸ್

ಭೂಲೋಕದ ಸ್ವರ್ಗದಂತಿದ್ದ ಮಾಲ್ಡೀವ್ಸ್​ ಸದ್ಯ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಡಿದ ಎಡ್ವಟ್ಟಿನಿಂದ  ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ.
Photo Credit : News Kannada

ನವದೆಹಲಿ: ಭೂಲೋಕದ ಸ್ವರ್ಗದಂತಿದ್ದ ಮಾಲ್ಡೀವ್ಸ್​ ಸದ್ಯ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಡಿದ ಎಡ್ವಟ್ಟಿನಿಂದ  ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ.

ಲಕ್ಷದ್ವೀಪದಲ್ಲಿ ಮೋದಿ ಇಟ್ಟ ಹೆಜ್ಜೆ ಮಾಲ್ಡೀವ್ಸ್​ನಲ್ಲಿ ಭಾರತದ ಪ್ರವಾಸಿಗರೇ ಇಲ್ಲದಂತೆ ಮಾಡಿದೆ. ಮುಯಿಝು ಮೊಂಡತನದ ಹೇಳಿಕೆಯಿಂದ ಮಾಲ್ಡೀವ್ಸ್​ ಅಕ್ಷರಶಃ ನಲುಗಿ ಹೋಗಿದೆ.

ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹಾಳು ಮಾಡಿಕೊಂಡಿರುವ ಮಾಲ್ಡೀವ್ಸ್‌ ಈಗ, ಚೀನಾದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ ಎನ್ನಲಾಗಿದೆ. ಒಂದು ವೇಳೆ ಮಾಲ್ಡೀವ್ಸ್‌ ತನ್ನ ನೀತಿಗಳನ್ನ ಬದಲಿಸದಿದ್ದರೆ, ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳಲಿದೆ ಅಂತ ಐಎಮ್​ಎಫ್​ ಎಚ್ಚರಿಸಿದೆ ಅಂತ ವರದಿಗಳು ತಿಳಿಸಿವೆ.

ಭಾರತ-ವಿರೋಧಿ ನಿಲುವು, ಸಚಿವರ ಮೋದಿ ವಿರೋಧಿ ಹೇಳಿಕೆಗಳು ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನ ಕೆಡಿಸಿವೆ. ಇದರಿಂದ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್​ ನಿಂದ ದೂರ ಉಳಿದಿದ್ದು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಈ ಆರ್ಥಿಕ ಕುಸಿತ ತಗ್ಗಿಸಲು ಮಾಲ್ಡೀವ್ಸ್ ಬೇಲ್‌ಔಟ್ ಸಾಲ ಕೋರಿ IMFನತ್ತ ಮುಖ ಮಾಡಿದೆ.

ಮಾಲ್ಡೀವ್ಸ್ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ಹೊಂದಿದ್ದು, ಈ ಪೈಕಿ ಚೀನಾವೊಂದಕ್ಕೇ 25,000 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದೆ. ಹೊಸ ಸಾಲ ಪಡೆಯಲು ಚೀನಾದ ಮತ್ತಷ್ಟು ಷರತ್ತು ಒಪ್ಪಲೇ ಬೇಕಿದೆ. ಇಲ್ಲದಿದ್ದರೆ ಸಾಲ ಸಿಗಲ್ಲ, ಸಿಕ್ಕಿದರೆ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗದೇ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುತ್ತದೆ.

ಮಾಲ್ಡೀವ್ಸ್‌ಗೆ ಪ್ರವಾಸಿಗರ ಪ್ರಮುಖ ಮೂಲವಾಗಿದ್ದ ಭಾರತ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರಯಾಣಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಈಗ ಐದನೇ ಸ್ಥಾನಕ್ಕೆ ಕುಸಿದಿದೆ. ಇದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ತಟ್ಟಿದೆ.

ಏನೇ ಇರಲಿ ಭಾರತ ವನ್ನು ಎದುರುಹಾಕಿಕೊಳ್ಳುವ ಅವಶ್ಯಕೆತೆ ಮಾಲ್ಡೀವ್ಸ್‌ಗೆ ಇರಲಿಲ್ಲ. ಅದೃಕ್ ಎದುರು ಹಾಕಿಕೊಂಡು ಅದ್ರ ಪರಿಣಾಮ ಎದುರಿಸುತ್ತಿದ್ದಾರೆ ಎನ್ನಬೇಕು ಅಷ್ಟೇ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು