News Karnataka Kannada
Friday, April 12 2024
Cricket
ದೆಹಲಿ

ಜುಲೈ 22ರಿಂದ ಅಂತಾರಾಷ್ಟ್ರೀಯ ದೇವಾಲಯಗಳ ಸಮಾವೇಶ

International Temple Conference to be held from July 22
Photo Credit : IANS

ನವದೆಹಲಿ: ಜುಲೈ 22 ರಿಂದ 24 ರವರೆಗೆ ವಾರಣಾಸಿಯ ರುದ್ರಾಕ್ಷ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ದೇವಾಲಯಗಳ ಸಮಾವೇಶ ನಡೆಯಲಿದೆ.

ಟೆಂಪಲ್ ಕನೆಕ್ಟ್ (ಇಂಡಿಯಾ) ಸಂಸ್ಥೆ ಆಯೋಜಿಸಿರುವ ದೇವಾಲಯಗಳ ನಿರ್ವಹಣೆ ಕುರಿತು ವಿಶ್ವದ ಮೊದಲ ಕಾರ್ಯಕ್ರಮವಾಗಿದ್ದು, ದೇವಾಲಯದ ಪರಿಸರ ಸುವ್ಯವಸ್ಥೆ ಮತ್ತು ನಿರ್ವಹಣೆ ಸುಸ್ಥಿತಿ ಕುರಿತು ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಟೆಂಪಲ್ ಕನೆಕ್ಟ್ (ಭಾರತೀಯ ಮೂಲದ ದೇವಾಲಯಗಳಿಗೆ ಸಂಬಂಧಿಸಿದ ದಾಖಲಾತಿ, ಡಿಜಿಟಲೀಕರಣಕ್ಕೆ ಮೀಸಲಾಗಿರುವ ವೇದಿಕೆ) ಸಂಸ್ಥಾಪಕ ಗಿರೇಶ್ ಕುಲಕರ್ಣಿ ಈ ಸಮಾವೇಶದ ಮೂಲ ಸೂತ್ರಧಾರರು. ಮಹಾರಾಷ್ಟ್ರ ಕೌನ್ಸಿಲ್‌ ಸದಸ್ಯ ಮತ್ತು ಇಂಟರ್‌ನ್ಯಾಶನಲ್ ಟೆಂಪಲ್ಸ್ ಕನ್ವೆನ್ಶನ್ ಅಧ್ಯಕ್ಷ ಪ್ರಸಾದ್ ಲಾಡ್ ಕಾರ್ಯಕ್ರಮ ಆಯೋಜನೆ ಚುಕ್ಕಾಣಿ ಹಿಡಿದಿದ್ದಾರೆ.

ಮೂರು-ದಿನದ ಈವೆಂಟ್ ನಲ್ಲಿ ವಿಶ್ವಾದ್ಯಂತ ದೇವಾಲಯದ ನಿರ್ವಹಣಾ ತಂಡಗಳಿಗೆ ತರಬೇತಿ ಒದಗಿಸಲಾಗುತ್ತದೆ.  ಅಲ್ಲದೆ ದೇವಳ ನಿರ್ವಹಣೆ ಕುರಿತು ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಮಾಸ್ಟರ್ ತರಗತಿಗೆ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ದೇವಾಲಯದ ಸುರಕ್ಷತೆ, ಭದ್ರತೆ ಮತ್ತು ಕಣ್ಗಾವಲು, ನಿಧಿ ನಿರ್ವಹಣೆ, ವಿಪತ್ತು ನಿರ್ವಹಣೆ, ನೈರ್ಮಲ್ಯೀಕರಣ ಮತ್ತು ನೈರ್ಮಲ್ಯ ಮತ್ತು ಕೃತಕ ಬುದ್ಧಿಮತ್ತೆ ಮೂಲಕ ದೇವಳ ನಿರ್ವಹಣೆ ಚರ್ಚೆ ನಡೆಯಲಿದೆ. ಹಿಂದೂ ಧರ್ಮ, ಜೈನ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮದ ದೇವಾಲಯಗಳ ಕುರಿತು ಚರ್ಚೆ ನಡೆಯಲಿದೆ.

ಜೈನ ಧರ್ಮಶಾಲೆಗಳು, ಪ್ರಮುಖ ಧಾರ್ಮಿಕ ದತ್ತಿಗಳು, ಯುಕೆ ಹಿಂದೂ ದೇವಾಲಯಗಳಲ್ಲಿನ ಸಂಘಗಳು, ಇಸ್ಕಾನ್ ದೇವಾಲಯಗಳು, ಅನ್ನ ಕ್ಷೇತ್ರ ಆಡಳಿತ ಮಂಡಳಿಗಳು, ವಿವಿಧ ಯಾತ್ರಾ ಸ್ಥಳಗಳ ಪುರೋಹಿತ ಮಹಾಸಂಘ ಮತ್ತು ತೀರ್ಥಯಾತ್ರೆ ಪ್ರಚಾರ ಮಂಡಳಿಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆರ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅಲ್ಲದೆ ತಿರುಪತಿ ದೇವಳ ಎಕ್ಸಿಕ್ಯೂಟಿವ್‌ ಆಫೀಸರ್‌ ಧರ್ಮರೆಡ್ಡಿ ಪಾಲ್ಗೊಳ್ಳುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು